Bengaluru, ಏಪ್ರಿಲ್ 30 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 12ನೇ ಎಪಿಸೋಡ್‌ ಕಥೆ ಹೀಗಿದೆ. ವಿದ್ಯಾ ತಂದೆ ಚೆಲುವನಿಗೆ ಭದ್ರೇಗೌಡ ದುಡ್ಡು ಕೊಟ್ಟಿದ್ದನ್ನು ಸಾವಿತ್ರಿ ನೋಡುತ್ತಾಳೆ. ಯಾರೋ ಮಾಡಿದ ಸಾಲವನ್ನು ಇವನು ಏಕೆ ತೀರಿಸಬೇಕು? ಅಣ್ಣ ಅಷ್ಟೆಲ್ಲಾ ಹೇಳಿದ್ದರೂ ಮತ್ತೆ ಆ ಹುಡುಗಿ ಸಹವಾಸ ಮಾಡಿದ್ದಾನೆ, ಇದೆಲ್ಲಾ ಅಣ್ಣನಿಗೆ ಹೇಳಿ ನಿನಗೆ ಪಾಠ ಕಲಿಸುತ್ತೇನೆ ಎಂದು ಸಿಟ್ಟಾಗುತ್ತಾಳೆ. ಮನೆಗೆ ಬಂದು ಎಲ್ಲಾ ವಿಚಾರವನ್ನು ಅಣ್ಣನ ಬಳಿ ಹೇಳುತ್ತಾಳೆ.

ಆ ಹುಡುಗಿಯನ್ನು ಮರೆತುಬಿಡು ಎಂದು ಹೇಳಿದರೂ ಭದ್ರ ಮತ್ತೆ ಅವಳ ತಂದೆಗೆ ಹಣ ನೀಡಿದ್ದನ್ನು ಕೇಳಿ ಶಿವರಾಮೇಗೌಡ ಕೆಂಡಾಮಂಡಲವಾಗುತ್ತಾನೆ. ಭದ್ರನನ್ನು ಕರೆಯುತ್ತಾನೆ, ಭದ್ರ ಮೌನವಾಗಿ ಅಪ್ಪನ ಮುಂದೆ ಬಂದು ನಿಲ್ಲುತ್ತಾನೆ. ಶಿವರಾಮ ಕೋಪದಿಂದ ಭದ್ರ ಎಂದು ಅರಚುತ್ತಾನೆ. ಅಪ್ಪಯ್ಯ, ಹೆಣ್ಣು ನೋಡಲು ಹೋಗೋಣ ಎಂದಿರಲ್ಲ, ನಾನು ಸಿದ್ಧನಿದ್ದೇನೆ ಎನ್ನುತ್ತಾನೆ. ಆ ಮಾತು ಕೇಳಿ ಶಿವರಾಮೇಗೌಡನಿ...