ಭಾರತ, ಏಪ್ರಿಲ್ 18 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 4ನೇ ಎಪಿಸೋಡ್‌ ಕಥೆ ಹೀಗಿದೆ. ಶಿವರಾಮೇಗೌಡ, ಮನೆದೇವರ ಪೂಜೆಗಾಗಿ ಎಲ್ಲಾ ತಯಾರಿ ನಡೆಸುತ್ತಿದ್ದರೆ ತಮ್ಮನ ಹೆಂಡತಿ ಈಶ್ವರಿ ತನ್ನ ಗಂಡ, ಮಕ್ಕಳಿಗೆ ಅಧಿಕಾರ ಕೊಡಿಸಬೇಕೆಂದು ಕುತಂತ್ರ ಮಾಡುತ್ತಿದ್ದಾಳೆ. ಶಿವರಾಮೇಗೌಡನ ತಂಗಿ ಸಾವಿತ್ರಿ ತನ್ನ ಮಗಳು ವಿನಂತಿಯನ್ನು ಭದ್ರೇಗೌಡನಿಗೆ ಕೊಟ್ಟು ಮದುವೆ ಮಾಡಬೇಕೆಂದು ಶತಪ್ರಯತ್ನ ಮಾಡುತ್ತಿದ್ದಾಳೆ.

ವಿನಂತಿ ನಿನ್ನ ಅತ್ತೆ ಮಗಳು, ಅವಳಿಗೂ ನೀನು ಎಂದರೆ ಇಷ್ಟ ನೀನೇಕೆ ಅವಳನ್ನು ಮದುವೆ ಆಗಬಾರದು ಎಂದು ಭದ್ರೇಗೌಡನ ಬಳಿ ಕ್ವಾಟ್ಲೆ ಕೇಳುತ್ತಾನೆ. ಮದುವೆ ಆಗಲು ಅತ್ತೆ ಮಗಳೇ ಆಗಬೇಕು ಅಂತೇನಿಲ್ಲ, ಮನಸ್ಸಿಗೆ ಇಷ್ಟವಾಗುವ ಹುಡುಗಿ ಸಿಗಬೇಕು ಎಂದು ಭದ್ರ ಹೇಳುತ್ತಾನೆ. ವಿದ್ಯಾ ಕಾಲ್ಗೆಜ್ಜೆಯನ್ನು ಹಿಡಿದು ಅವಳನ್ನೇ ನೆನಪಿಸಿಕೊಳ್ಳುತ್ತಾನೆ. ಅವಳ ಮಾತು, ಅವಳ ನಗುವೇ ಅವನ ಮುಂದೆ ಸುಳಿದಾಡಿದಂತೆ ಆಗುತ್ತದೆ. ನೀನು ಯಾರು? ಎಲ್ಲಿದ್ದೀಯ? ಮತ್...