Bengaluru, ಫೆಬ್ರವರಿ 23 -- Muddusose Serial: ಬಿಗ್‌ ಬಾಸ್‌ ಕನ್ನಡ 11ರ ಮೂಲಕ ಕನ್ನಡಿಗರ ಮನೆ ಮನಗಳನ್ನು ತಲುಪಿದ್ದಾರೆ ತ್ರಿವಿಕ್ರಮ್. ಬಿಗ್‌ ಬಾಸ್‌ನಲ್ಲಿ ಕಪ್‌ ಗೆಲ್ಲುವ ಫೇವರಿಟ್‌ ಸ್ಪರ್ಧಿಯೂ ಎನಿಸಿಕೊಂಡಿದ್ದರು. ಆದರೆ, ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟರು. ಇದೀಗ ಇದೇ ತ್ರಿವಿಕ್ರಮ್‌ ಬಿಗ್‌ ಬಾಸ್‌ ಬಳಿಕ ಏನ್‌ಮಾಡ್ತಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಸದ್ದಿಲ್ಲದೆ ಶಾಲಾ ಬಾಲಕಿಯನ್ನು ವರಿಸಲು ಸಿದ್ಧತೆ ನಡೆಸಿದ್ದಾರೆ ತ್ರಿವಿಕ್ರಮ್‌. ಅಂದರೆ, ಮುದ್ದುಸೊಸೆ ಸೀರಿಯಲ್‌ನಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆ ಆಗೋ ಗಂಡಾಗಿ ಕಂಡಿದ್ದಾರೆ ತ್ರಿವಿಕ್ರಮ್‌.

ಕಲರ್ಸ್‌ ಕನ್ನಡದಲ್ಲಿ ಬ್ಯಾಕ್‌ ಟು ಬ್ಯಾಕ್‌ ಹೊಸ ಸೀರಿಯಲ್‌ಗಳು ಆಗಮಿಸುತ್ತಿವೆ. ಡಿಸೆಂಬರ್‌ನಲ್ಲಿ ನೂರು ಜನ್ಮಕೂ ಸೀರಿಯಲ್‌ ಶುರುವಾಗಿತ್ತು. ಜನವರಿಯಲ್ಲಿ ವಧು ಮತ್ತು ಯಜಮಾನ ಸೀರಿಯಲ್‌ ಶುರುವಾದರೆ, ಇನ್ನೇನು ಮಾರ್ಚ್‌ನಲ್ಲಿ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ ಪ್ರಸಾರ ಆರಂಭಿಸಲಿದೆ. ಹೀಗಿರುವಾಗಲೇ ಇದೀ...