ಭಾರತ, ಏಪ್ರಿಲ್ 19 -- ಬೆಂಗಳೂರು: ಗತಕಾಲದ ಭೂಗತಲೋಕದ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಮಧ್ಯರಾತ್ರಿಯಲ್ಲಿ ಗುಂಡಿನ ದಾಳಿ ನಡೆದಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಾಮನಗರ ತಾಲೂಕಿನ ಬಿಡದಿಯ ಅವರ ಭವ್ಯ ಬಂಗಲೆಯ ಸಮೀಪವೇ ಈ ದಾಳಿ ನಡೆದಿದೆ. ಸದ್ಯಕ್ಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ರಿಕ್ಕಿ ರೈಗೆ ಚಿಕಿತ್ಸೆ ಮುಂದುವರೆದಿದೆ. ಗುಂಡು ಹಾರಿಸಿದ ಘಟನೆಗೆ ಸಂಬಂಧಿಸಿದಂತೆ ರಿಕ್ಕಿ ಕಾರು ಚಾಲಕ ಬಸವರಾಜು ಬಿಡದಿಠಾಣೆಗೆ ದೂರು ನೀಡಿದ್ದಾರೆ. ರಿಕ್ಕಿ ರೈ ಮೊದಲ ಪತ್ನಿ ಮೊದಲ ಪತ್ನಿ ಅನ್ನಪೂರ್ಣ, ರಾಕೇಶ್ ಮಲ್ಲಿ ಹಾಗೂ ನಿತೇಶ್ ರಿಯಲ್‌ ಎಸ್ಟೇಟ್ ಕಂಪನಿ ವಿರುದ್ಧ ದೂರು ದಾಖಲಿಸಲಾಗಿದೆ.

ಸಾಮಾನ್ಯವಾಗಿ ಯಾವಾಗಲೂ ರಿಕ್ಕಿ ಕಾರು ಚಾಲನೆ ಮಾಡುತ್ತಿದ್ದರು. ಅವರ ಅದೃಷ್ಟ ಚೆನ್ನಾಗಿತ್ತೇನೋ? ಕಾರು ಚಾಲಕ ಬಸವರಾಜು ಡ್ರೈವಿಂಗ್‌ ಮಾಡುತ್ತಿದ್ದರು. ಮನೆಯಿಂದ ಹೊರ ಬರುತ್ತಿದ್ದಂತೆ ಏಕಾಏಕಿ ಗುಂಡು ಹಾರಿಸಲಾಗಿದೆ. ಆಗ ಬಸವರಾಜು ಮುಂದೆ ಬಾಗಿ ಬಚಾವ್‌ ಆಗಿದ್ದಾರೆ. ಗುಂಡು ಪಕ್ಕದಲ್ಲಿ ಕುಳಿತಿದ್ದ ರಿಕ್ಕಿ ಗೆ...