Bengaluru, ಫೆಬ್ರವರಿ 3 -- I Am God: ಕನ್ನಡ ಚಿತ್ರರಂಗ ಮತ್ತು ರಾಜ್ಯ ಸರ್ಕಾರದ ನಡುವಿನ ನಂಟು ಈಗಿನದಲ್ಲ. ಅದು ದಶಕಗಳಿಂದಲೂ ಒಟ್ಟಿಗೆ ನಡೆದು ಬಂದಿದೆ. ಸಿನಿಮಾ ಸಂಬಂಧಿ ಕಾರ್ಯಕ್ರಮಗಳಿಗೆ ಸಚಿವರು, ಶಾಸಕರಷ್ಟೇ ಅಲ್ಲ ಸಿಎಂ ಸಹ ಬಂದ ಸಾಕಷ್ಟು ಉದಾಹರಣಗಳಿವೆ. ಇದೀಗ ತಮ್ಮ ನಿತ್ಯದ ಕೆಲಸಗಳ ನಡುವೆ ಮುಖ್ಯಮಂತ್ರಿ ಸಿದ್ಧರಾಮಯ್ಯ 'ಐ ಆ್ಯಮ್ ಗಾಡ್' ಎಂದಿದ್ದಾರೆ. ಅಂದರೆ, 'ಐ ಆ್ಯಮ್ ಗಾಡ್' ಹೆಸರಿನ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಸಿಎಂ ಬಿಡುಗಡೆ ಮಾಡಿದ್ದಾರೆ.

ರಾಜಕೀಯ ಜಂಜಡಗಳ ನಡುವೆ ಸಿಎಂ ಸಿದ್ದರಾಮಯ್ಯ ಆಗೊಂದು ಈಗೊಂಡು ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಅದರಂತೆ ಇತ್ತೀಚೆಗಷ್ಟೇ ತಮ್ಮ ಆತ್ಮೀಯ ಗೆಳೆಯ ಮುಡಾ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಅವರ ಮಗನ ಹೊಸ ಸಿನಿಮಾ ಪಯಣಕ್ಕೆ ಶುಭಾಶಯ ಕೋರಿದ್ದಾರೆ. ಧ್ವಜ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದ ರವಿ ಗೌಡ, ಈಗ I'm god ಸಿನಿಮಾ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ಈ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಅನಾವ...