Bengaluru, ಏಪ್ರಿಲ್ 11 -- ಬಹುತೇಕ ಹೆಣ್ಮಕ್ಕಳು ಸುಂದರವಾದ, ಹೊಳೆಯುವ ಚರ್ಮವನ್ನು ಪಡೆಯಲು ಇಷ್ಟಪಡುತ್ತಾರೆ. ಇದು ಪ್ರತಿಯೊಬ್ಬರ ಕನಸಾಗಿದ್ದರೂ ಕೆಲವರಷ್ಟೇ ಈ ಆಸೆಯನ್ನು ಪೂರೈಸಿಕೊಳ್ಳುತ್ತಾರೆ. ಅನೇಕ ಮಹಿಳೆಯರು ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಲು ಪಾರ್ಲರ್‌ಗಳಲ್ಲಿ ದುಬಾರಿ ಫೇಶಿಯಲ್‌ಗಳನ್ನು ಮಾಡುತ್ತಾರೆ. ಅವರು ವಿವಿಧ ಕ್ರೀಮ್‌ಗಳು ಮತ್ತು ಲೋಷನ್‌ಗಳನ್ನು ಬಳಸುತ್ತಾರೆ. ಆದರೆ, ಇದರಿಂದ ತ್ವಚೆ ಪ್ರಕಾಶಮಾನವಾಗಿ ಹೊಳೆಯಲು ಸಾಧ್ಯವಿಲ್ಲ. ನೀವು ಸೌಂದರ್ಯ ಪ್ರಿಯರಾಗಿದ್ದರೆ, ನಿಮ್ಮ ಚರ್ಮಕ್ಕೆ ನೈಸರ್ಗಿಕ ವಿಧಾನಗಳು ಮತ್ತು ಪದಾರ್ಥಗಳನ್ನು ಆಯ್ಕೆ ಮಾಡಲು ನೀವು ಬಯಸಿದರೆ, ಮುಖದ ಸ್ಟೀಮಿಂಗ್ ನಿಮಗೆ ಸಾಕಷ್ಟು ಸಹಾಯ ಮಾಡುತ್ತದೆ.

ಪಾರ್ಲರ್‌ಗೆ ಹೋಗದೆ ಮನೆಯಲ್ಲೇ ಯಾವುದೇ ಖರ್ಚಿಲ್ಲದೆ ಮುಖಕ್ಕೆ ಸ್ಟೀಮಿಂಗ್ (ಹಬೆ) ಮಾಡುವುದರಿಂದ ತ್ವಚೆಗೆ ಹೊಳಪು ತರುತ್ತದೆ. ಚರ್ಮವನ್ನು ಹೊಳೆಯುವಂತೆ ಮತ್ತು ಆರೋಗ್ಯಕರವಾಗಿಡಲು ಇದು ಸುಲಭ ಮತ್ತು ನೈಸರ್ಗಿಕ ಮಾರ್ಗವಾಗಿದೆ. ಸ್ಟೀಮಿಂಗ್ ಮಾಡುವುದರಿಂದ ಚರ್ಮವನ್ನು ಒಳಗಿನಿಂದ ಶುದ್ಧೀ...