Bengaluru, ಏಪ್ರಿಲ್ 8 -- ಮುಖ ಕಾಂತಿ ಕಳೆದುಕೊಂಡಿದೆ ಎಂದು ಕೆಲವರು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳತ್ತ ಮೊರೆ ಹೋಗುತ್ತಾರೆ. ಪ್ರತಿದಿನ ಬ್ಯೂಟಿ ಕ್ರೀಮ್, ಸೀರಂ, ಫೇಸ್ ವಾಷ್ ಮುಂತಾದ ಅನೇಕ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ, ಇದರಿಂದ ಪ್ರಯೋಜನ ಸಿಗುತ್ತದೆ ಅಂತಾ ಹೇಳಲು ಸಾಧ್ಯವಿಲ್ಲ. ದುಬಾರಿ ಉತ್ಪನ್ನಗಳನ್ನು ಖರೀದಿಸಿ ದುಂದುವೆಚ್ಚ ಮಾಡುವುದರ ಬದಲು ಅಡುಗೆಮನೆಯಲ್ಲಿ ಲಭ್ಯವಿರುವ ಪದಾರ್ಥವನ್ನು ಬಳಸಬಹುದು. ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಸಿಗುವ ಅರಶಿನವು ಸುಲಭವಾಗಿ ಲಭ್ಯವಾಗುವ ಹಾಗೂ ಯಾವುದೇ ರಾಸಾಯನಿಕ ಇಲ್ಲದ ಶುದ್ಧ ಪ್ರಾಕೃತಿಕ ಪರಿಹಾರ.

ತರಕಾರಿ ಹಾಗೂ ಮಾಂಸಾಹಾರಿ ಅಡುಗೆಗಳಿಗೆ ಅರಿಶಿನ ಬಳಸುತ್ತಾರೆ. ಹಾಲಿನೊಂದಿಗೂ ಅರಶಿನ ಬೆರೆಸಿ ಕುಡಿಯುತ್ತಾರೆ. ದೇಹದ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮಕ್ಕೂ ಅದರ ಪ್ರಯೋಜನ ಹಲವು. ಇದರಲ್ಲಿ ಶಕ್ತಿಯುತ ಆಂಟಿ-ಬ್ಯಾಕ್ಟೀರಿಯಲ್ ಮತ್ತು ಆಂಟಿ-ಇನ್‌ಫ್ಲಾಮೇಟರಿ ಗುಣಗಳಿವೆ. ಅರಿಶಿನವು ಮುಖದ ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಮೊಡವೆ, ಕಲೆ, ಕಪ್ಪು ಗುರುತು ಇತ್ಯಾದಿಗಳನ್ನ...