Bengaluru, ಜೂನ್ 11 -- ಪ್ರತಿಯೊಬ್ಬ ಮನುಷ್ಯನ ದೇಹದ ಮೇಲೆ ಮಚ್ಚೆಗಳಿರುತ್ತವೆ. ಜ್ಯೊತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ದೇಹದ ಮೇಲಿರುವ ಮಚ್ಚೆ ಅಥವಾ ಮೋಲ್‌ಗಳು ಬಹಳಷ್ಟು ಅರ್ಥಗಳನ್ನು ಹೊಂದಿವೆ ಎಂಬ ನಂಬಿಕೆಯಿದೆ. ದೇಹದ ಕೆಲವು ಭಾಗಗಳಲ್ಲಿರುವ ಮಚ್ಚೆಗಳನ್ನು ನೋಡಿ ಅದು ಶುಭ ಅಥವಾ ಅಶುಭ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಮಚ್ಚೆಗಳ ಆಧಾರದ ಮೇಲೆ, ವ್ಯಕ್ತಿಯ ನಡವಳಿಕೆ, ಭಾವನೆಗಳು, ಭವಿಷ್ಯ, ಅದೃಷ್ಟ ಮತ್ತು ಲಾಭದಂತಹ ವಿಷಯಗಳನ್ನ ಹೇಳುತ್ತಾರೆ. ಸಾಮುದ್ರಿಕ ಶಾಸ್ತ್ರದ ಮೂಲಕ ನಾವು ಅನೇಕ ವಿಷಯಗಳನ್ನು ಕಲಿಯಬಹುದು. ಸಾಮುದ್ರಿಕ ಶಾಸ್ತ್ರವು ದೇಹದ ಮೇಲೆ ಇರುವ ಮಚ್ಚೆಗಳ ಬಗ್ಗೆ ವಿವರವಾಗಿ ಹೇಳುತ್ತೆ. ನಮ್ಮಲ್ಲಿ ಅನೇಕ ಜನರಿಗೆ ಮುಖದಲ್ಲಿ ಮಚ್ಚೆಗಳು ಇರುತ್ತವೆ. ಅವು ಕೆಲವು ಸೂಚನೆಗಳನ್ನು ನೀಡುತ್ತವೆ. ನಿಮ್ಮ ಮುಖದ ಮೇಲೆ ಈ 4 ಸ್ಥಳಗಳಲ್ಲಿ ಇರುವ ಮಚ್ಚೆಗಳ ಹಿಂದಿನ ರಹಸ್ಯವೇನು? ಅದರಿಂದ ನೀವು ಅದೃಷ್ಟವಂತರು ಎಂದು ಹೇಗೆ ಹೇಳಬಹುದು ಎಂದು ನೋಡೋಣ.

ಮುಖದ ಮೇಲಿನ ಮಚ್ಚೆಗಳು ನಿಮ್ಮನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ....