Bangalore, ಏಪ್ರಿಲ್ 2 -- ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ತಮ್ಮ ವೃತ್ತಿಜೀವನಕ್ಕೆ ಸಂಬಂಧಿಸಿ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ತಮ್ಮ ದೇಶೀಯ ತಂಡ ಮುಂಬೈ ಅನ್ನು ತೊರೆಯಲು ಅವರು ನಿರ್ಧರಿಸಿದ್ದಾರೆ. ಬಹಳ ಸಮಯದಿಂದ ಮುಂಬೈ ಪರ ಆಡುತ್ತಿದ್ದ ಜೈಸ್ವಾಲ್, ಈಗ ತಮ್ಮ ಹೊಸ ತಂಡವನ್ನು ಹುಡುಕಿಕೊಂಡಿದ್ದಾರೆ.

ಜೈಸ್ವಾಲ್ ಮಂಗಳವಾರ (ಏಪ್ರಿಲ್ 01) ಮುಂಬೈ ಕ್ರಿಕೆಟ್ ಅಸೋಸಿಯೇಷನ್​ಗೆ ಬರೆದ ಪತ್ರದಲ್ಲಿ ಮುಂಬೈ ಬಿಟ್ಟು ಗೋವಾ ಪರ ಆಡಲು ಬಯಸುವುದಾಗಿ ತಿಳಿಸಿದ್ದಾರೆ. ಅಲ್ಲಿ ಜೈಸ್ವಾಲ್​ಗೆ ನಾಯಕತ್ವದ ಜವಾಬ್ದಾರಿಯೂ ಸಿಗುವ ಸಾಧ್ಯತೆಯೂ ಇದೆ. ಯಶಸ್ವಿ ಅವರ ಗೋವಾಕ್ಕೆ ಹೋಗುವ ವಿನಂತಿಯನ್ನು ಎಂಸಿಎ ಒಪ್ಪಿಕೊಂಡಿದೆ. ಎಡಗೈ ಬ್ಯಾಟರ್ 2025-26ರ ಸೀಸನ್‌ನಲ್ಲಿ ಗೋವಾ ಪರ ಆಡುವುದನ್ನು ಕಾಣಬಹುದು.

ಎಂಸಿಎ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, 'ಇದು ಆಶ್ಚರ್ಯಕರ ವಿಷಯ. ಜೈಸ್ವಾಲ್ ಯೋಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ತನ್ನನ್ನು ಮುಂಬೈ ತಂಡದಿಂದ ಬ...