ಭಾರತ, ಏಪ್ರಿಲ್ 6 -- ಐಪಿಎಲ್ 2025ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎದುರಿಸಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಸೋಲಿನಿಂದ ಹೊರಬರಲು ಎದುರು ನೋಡುತ್ತಿವೆ. ಅದರಲ್ಲೂ ಮುಂಬೈ ತಂಡವು ಟೂರ್ನಿಯಲ್ಲಿ ಜೀವಂತವಾಗಿರಲು ಗೆಲುವು ಅನಿವಾರ್ಯ ಎನಿಸಿದೆ. ಅತ್ತ ಟೂರ್ನಿಯಲ್ಲಿ ಸತತ ಗೆಲುವುಗಳೊಂದಿಗೆ ಭರ್ಜರಿ ಆರಂಭ ಪಡೆದ ಆರ್‌ಸಿಬಿ, ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಮುಗ್ಗರಿಸಿತು. ಹೀಗಾಗಿ ಮುಂಬೈ ತವರಲ್ಲಿ ಇದೀಗ ಗೆಲುವಿನ ಹಳಿಗೆ ಮರಳುವ ಲೆಕ್ಕಾಚಾರ ಹಾಕಿಕೊಂಡಿದೆ.

ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ವೇಗಿ ಜಸ್ಪ್ರೀತ್ ಬುಮ್ರಾ ಮುಂಬೈ ಶಿಬಿರ ಸೇರಿಕೊಂಡಿದ್ದಾರೆ. ಅದರ ಬೆನ್ನಲ್ಲೇ ನಾಳಿನ ಪಂದ್ಯಕ್ಕೆ ಆಯ್ಕೆಗೆ ಲಭ್ಯವಿರಲಿದ್ದಾರೆ ಎಂದು ತಂಡದ ಕೋಚ್‌ ಮಹೇಲಾ ಜಯವರ್ಧನೆ ತಿಳಿಸಿದ್ದಾರೆ. ಹೀಗಾಗಿ ಮುಂಬೈ ತಂಡಕ್ಕೆ ಇದು ಬಲ ತುಂಬಲಿದೆ.

ಮುಂಬೈನಲ್ಲಿ ನಡೆಯುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ. ಹವಾಮಾನ ...