ಭಾರತ, ಮೇ 5 -- ಐಪಿಎಲ್‌ 18ನೇ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದ್ದು, ಕೆಲವು ತಂಡಗಳು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಣಕ್ಕಿಳಿಯುತ್ತಿವೆ. ಲೀಗ್‌ನ 56ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ. ಪಂದ್ಯವು ಎಂಐ ತವರು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಕಳಪೆ ಆರಂಭದ ಬಳಿಕ ಸತತ ಆರು ಪಂದ್ಯಗಳಲ್ಲಿ ಗೆದ್ದು ಕಂಬ್ಯಾಕ್‌ ಮಾಡಿರುವ ಮುಂಬೈ, ಇದೀಗ ಪ್ಲೇಆಫ್‌ ಹಂತಕ್ಕೇರಲು ಕೆಲವೇ ಹೆಜ್ಜೆಗಳಷ್ಟು ಹಿಂದಿದೆ. ಅತ್ತ ಗುಜರಾತ್‌ ಕೂಡಾ ಲೀಗ್‌ನಲ್ಲಿ ಪ್ರಬಲ ಫಾರ್ಮ್‌ನಲ್ಲಿದ್ದು, ಪ್ಲೇಆಫ್‌ ಹಂತಕ್ಕೇರುವ ಫೇವರೆಟ್‌ ತಂಡಗಳಲ್ಲಿ ಒಂದಾಗಿದೆ.

ಮುಂಬೈ ಇಂಡಿಯನ್ಸ್ ತಂಡವು ಈವರೆಗೆ ಆಡಿದ 11 ಪಂದ್ಯಗಳಲ್ಲಿ ಏಳು ಗೆಲುವು ಮತ್ತು ನಾಲ್ಕು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನದಲ್ಲಿದೆ. ಕೊನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಸತತ ಆರು ಪಂದ್ಯಗಳನ್ನು ಗೆದ್ದಿರುವ ಹಾರ್ದಿಕ್‌ ಪಾಂಡ್ಯ ಬಳಗವು ಆತ್ಮವಿಶ...