ಭಾರತ, ಏಪ್ರಿಲ್ 21 -- ಬಾಲಿವುಡ್ ನಟ ಸುನಿಲ್ ಶೆಟ್ಟಿ ಹಲವು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದರೂ, ತಮ್ಮ ಮೂಲವನ್ನು ಮರೆತಿಲ್ಲ. ಇವರು ಪ್ರತಿವರ್ಷ ತಮ್ಮ ಕುಲದೇವರ ಪೂಜೆ ಹಾಗೂ ಜಾತ್ರೆಗೆ ಬರುತ್ತಾರೆ. ಈ ವರ್ಷವೂ ಸುನಿಲ್ ಶೆಟ್ಟಿ ಬಪ್ಪನಾಡು ಜಾತ್ರೆಗೆ ಬಂದಿದ್ದು, ಕಾಪು ಮಾರಿಯಮ್ಮ ದೇಗುಲಕ್ಕೂ ಭೇಟಿ ಕೊಟ್ಟಿದ್ದಾರೆ.

ಬಾಲಿವುಡ್ ನಟ ಸುನಿಲ್ ಶೆಟ್ಟಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದವರು. ಬಪ್ಪನಾಡು ದೇವಸ್ಥಾನದ ಕಟ್ಟೆಪೂಜೆ ಇವರ ಮನೆಯ ಮುಂಭಾಗವೇ ನಡೆಯುತ್ತದೆ. ಇತ್ತೀಚೆಗೆ ತಿಂಗಳಿಗೊಮ್ಮೆಯಂತೆ ಅವರು ಊರಿಗೆ ಬಂದು ಹೋಗುತ್ತಲಿರುತ್ತಾರೆ. ಪ್ರತಿ ವರ್ಷ ನಡೆಯುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನಡೆಯುವ ಬ್ರಹ್ಮರಥೋತ್ಸವ ಸಂದರ್ಭ ತನ್ನ ಮನೆಯಿಂದ ನೀಡಲ್ಪಡುವ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಅವರು ವಿಧಿವತ್ತಾಗಿ ಪಾಲಿಸುತ್ತಾರೆ. ಜಾತ್ರೆಯ ದೊಡ್ಡ ಪ್ರಮಾಣದ ಜನಸಂದಣಿ ಕಳೆದ ಬಳಿಕ ತನ್ನ ಗನ್‌ಮ್ಯಾನ್‌ಗಳ ಜತೆ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುತ್ತಾರೆ. ಈ ಬಾರಿಯೂ ಊರ...