ಭಾರತ, ಏಪ್ರಿಲ್ 27 -- ಏಪ್ರಿಲ್ 27ರ ಭಾನುವಾರದ ಡಬಲ್ ಹೆಡ್ಡರ್​​ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಉಭಯ ತಂಡಗಳಿಗೂ ಇದು 2ನೇ ಮುಖಾಮುಖಿ. ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆಯುವ 45ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಜೊತೆಗೆ ಮೊದಲ ಮುಖಾಮುಖಿಯಲ್ಲಿ ಸೋಲು ಕಂಡಿದ್ದಕ್ಕೆ ಲಕ್ನೋ ವಿರುದ್ಧ ಸೇಡು ತೀರಿಸಿಕೊಳ್ಳಲು ಇದು ಒಳ್ಳೆಯ ಅವಕಾಶವೂ ಹೌದು.

ಎರಡೂ ತಂಡಗಳು 9 ಪಂದ್ಯಗಳಿಂದ ತಲಾ ಐದು ಗೆಲುವುಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನ ಮಧ್ಯಭಾಗದಲ್ಲಿವೆ. ಆ ಐದು ಗೆಲುವುಗಳಲ್ಲಿ, ಪ್ರತಿ ತಂಡದ ಐದು ವಿಭಿನ್ನ ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮುಂಬೈ ಪರ ಅಶ್ವನಿ ಕುಮಾರ್ , ಕರಣ್ ಶರ್ಮಾ, ವಿಲ್ ಜಾಕ್ಸ್ , ರೋಹಿತ್ ಶರ್ಮಾ ಮತ್ತು ಟ್ರೆಂಟ್ ಬೌಲ್ಟ್ . ಎಲ್‌ಎಸ್‌ಜಿ ಪರ ಶಾರ್ದೂಲ್ ಠಾಕೂರ್, ದಿಗ್ವೇಶ್ ರಾಠಿ, ನಿಕೋಲಸ್ ಪೂರನ್, ಏಡನ್ ಮಾರ್ಕ್ರಮ್ ಮತ್ತು ಆವೇಶ್ ಖಾನ್ ಪಂದ...