ಭಾರತ, ಫೆಬ್ರವರಿ 11 -- ಪಿ3 ಸರಣಿಯ ಇತ್ತೀಚಿನ ಸ್ಮಾರ್ಟ್ಫೋನ್ 'ರಿಯಲ್‌ಮಿ ಪಿ3 ಪ್ರೊʼ (Realme P3 Pro) ಮುಂದಿನ ವಾರ ಭಾರತಕ್ಕೆ ಪದಾರ್ಪಣೆ ಮಾಡಲಿದೆ ಎಂದು ರಿಯಲ್‌ಮಿ ಕಂಪನಿ ತಿಳಿಸಿದೆ. ಭಾರತದಲ್ಲಿ ಫೋನ್ ಬಿಡುಗಡೆಗೂ ಮುನ್ನ ಕಂಪನಿಯು ಈಗಾಗಲೇ ಹೊಸ ಫೋನ್‌ ಬಗೆಗಿನ ಸಾಕಷ್ಟು ವಿವರಗಳನ್ನು ಬಹಿರಂಗಪಡಿಸಿದೆ. ಮಧ್ಯಮ ಬೆಲೆಯ ಸ್ಮಾರ್ಟ್‌ ಫೋನ್‌ ಹೇಗಿರಲಿದೆ ಎಂಬ ಕುರಿತ ಐಡಿಯಾ ಈಗಾಗಲೇ ಸಿಕ್ಕಿದೆ. ಫೋನ್‌ ಭಾರತದಲ್ಲಿ ಖರೀದಿಗೆ ಲಭ್ಯವಾಗುವ ಮುನ್ನ ರಿಯಲ್‌ಮಿ ಪಿ3 ಪ್ರೊ ಫೋನ್‌ ಕುರಿತು ತಿಳಿಯೋಣ.

ಫೆಬ್ರುವರಿ 18ರಂದು ಮಧ್ಯಾಹ್ನ 12 ಗಂಟೆಗೆ ರಿಯಲ್ ಮಿ ಪಿ3 ಪ್ರೊ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಆರಂಭದಲ್ಲಿ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ವೆಬ್‌ಸೈಟ್‌ ಮೂಲಕ ಫೋನ್‌ ಖರೀದಿ ಮಾಡಬಹುದು. ಈ ಸ್ಮಾರ್ಟ್‌ಫೋನ್ ನೆಬ್ಯುಲಾ ಗ್ಲೋ, ಗ್ಯಾಲಕ್ಸಿ ಪರ್ಪಲ್ ಮತ್ತು ಸ್ಯಾಟರ್ನ್ ಬ್ರೌನ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಪಿ3 ಪ್ರೊ ಫೋನ್‌ನಲ್ಲಿ, ಈ ಸೆಗ್‌ಮೆಂಟಿನ ಮೊದಲ ಕ...