Bangalore, ಮೇ 10 -- ಬೆಂಗಳೂರು: ಭಾರತೀಯ ಹವಾಮಾನ ಇಲಾಖೆಯು 2025ನೇ ಸಾಲಿನ ನೈರುತ್ಯ ಮುಂಗಾರು ಮಳೆ(South west Monsoon 2025) ನಿಗದಿಗಿಂತ ನಾಲ್ಕೈದು ದಿನ ಮೊದಲೇ ಕೇರಳ ಪ್ರವೇಶಿಸಲಿದೆ ಎಂದು ಮುನ್ಸೂಚನೆ ನೀಡಿದೆ. ಜೂನ್‌ 1ಕ್ಕೆ ಮುಂಗಾರು ಕೇರಳದ ಮೂಲಕ ಪ್ರವೇಶಿಸುವುದು ವಾಡಿಕೆ. ಈ ಬಾರಿ ಮೇ 27ಕ್ಕೆ ನೈರುತ್ಯ ಮುಂಗಾರು ಪ್ರವೇಶಿಸಲಿದ್ದು, ಅಂದಿನಿಂದಲೇ ಮಳೆ ಆರಂಭವಾಗಲಿದೆ.ಬಹುತೇಕ ಜೂನ್‌ ಮೊದಲ ವಾರದಲ್ಲಿಯೇ ಮಳೆ ಶುರುವಾದರೂ ಹಿಂದಿನ ಕೆಲವು ವರ್ಷಗಳಲ್ಲಿ ಮೇ ಅಂತ್ಯಕ್ಕೆ ಮುಂಗಾರು ಆರಂಭವಾಗಿರುವ ವಾಡಿಕೆಯಯಯೂ ಇದೆ.ಆದರೆ ಮೊದಲ ಬಾರಿಗೆ ನಾಲ್ಕೈದು ದಿನ ಮೊದಲೇ ಮುಂಗಾರು ಕೇರಳವನ್ನು ಪ್ರವೇಶಿಸಿ ಭರ್ಜರಿಯಾಗಿಯೇ ಶುರುವಾಗಲಿದೆ. ಈಗಾಗಲೇ ಬಿಸಿಲಿನಿಂದ ಬಳಲಿರುವ ದಕ್ಷಿಣ ಭಾರತೀಯರಿಗೆ ಇದು ಖುಷಿಯನ್ನು ತರಲಿದೆ.

ಒಂದು ವೇಳೆ ಮಾನ್ಸೂನ್ ನಿರೀಕ್ಷಿತ ದಿನಾಂಕದಂದು ಭಾರತದ ಮುಖ್ಯ ಭೂಭಾಗಕ್ಕೆ ಆಗಮಿಸಿದರೆ, ಇದು ಅತ್ಯಂತ ಬೇಗನೆ ಆರಂಭವಾಗುವ ಮಳೆಯಾಗಲಿದೆ. ಇದಕ್ಕೂ ಮೊದಲು, ಇದು 2009 ರ ಮೇ 23 ರಂದು ಪ್ರಾರಂಭವಾಗಿತ್ತು. ಇ...