Belur, ಮೇ 25 -- ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಯಗಚಿ ನದಿಗೆ ಕಟ್ಟಲಾಗಿರುವ ಯಗಚಿ ಜಲಾಶಯವು ಪೂರ್ವ ಮುಂಗಾರಿನ ಭಾರೀ ಮಳೆಗೆ ಈ ಬಾರಿ ತುಂಬಿದೆ. ಪ್ರತಿ ವರ್ಷ ಮುಂಗಾರು ಆರಂಭಗೊಂಡ ಒಂದು ತಿಂಗಳ ಬಳಿಕ ತುಂಬುತ್ತಿದ್ದ ಯಗಚಿ ಜಲಾಶಯ ಈ ಬಾರಿ ಬೇಗನೇ ತುಂಬಿದೆ.
ಯಗಚಿ ಜಲಾಶಯಕ್ಕೆ ಚಿಕ್ಕಮಗಳೂರು ಭಾಗದಿಂದ ಭಾರೀ ನೀರು ಹರಿದು ಬಂದಿದ್ದರಿಂದ ಭರ್ತಿಯಾಗಿ ಸುಮಾರು 500 ಕ್ಯೂಸೆಕ್ ನೀರನ್ನು ಶನಿವಾರ ಮಧ್ಯಾಹ್ನದಿಂದಲೇ ನದಿ ಮೂಲಕ ಹೊರಬಿಡಲಾಗುತ್ತಿದೆ. ಯಗಚಿ ನದಿ ಗೊರೂರು ಬಳಿ ಹೇಮಾವತಿ ನದಿ ಸೇರಿಕೊಳ್ಳಲಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನಗಿರಿ ಬೆಟ್ಟದಲ್ಲಿ ಉಗಮವಾಗುವ ಯಗಚಿ ನದಿ ಹಾಸನ ಜಿಲ್ಲೆ ಪ್ರವೇಶಿಸಿ ಬೇಲೂರು ಪಟ್ಟಣದ ಸಮೀಪವೇ ಹಾದು ಹೋಗುತ್ತದೆ. ಈ ನದಿಗೆ ಬದರಿ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಈ ನದಿಗೆ ನಿರ್ಮಿಸಿರುವ ಆಣೆಕಟ್ಟೆಯ ಹೆಸರು ಯಗಚಿ.
ಯಗಚಿ ಜಲಾಶಯವು ನಿರ್ಮಾಣವಾಗಿದ್ದು 2001 ರಲ್ಲಿ. ಬಳಕೆ ಶುರುವಾಗಿ ಎರಡು ದಶಕವೇ ಕಳೆದಿದೆ. ಬೇಲೂರು ತಾಲ್ಲೂಕಿನಲ್ಲಿ ನೀರಾವರಿಗೆ ಸಹಾಯಕವಾಗಲಿ ಎನ್ನು...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.