ಭಾರತ, ಮಾರ್ಚ್ 6 -- ಮೀನ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಪೂರ್ವಾಭಾದ್ರ ನಕ್ಷತ್ರದ 4ನೇ ಪಾದ, ಉತ್ತರಾಭಾದ್ರ ನಕ್ಷತ್ರದ 1,2,3 ಮತ್ತು 4ನೇ ಪಾದಗಳು, ರೇವತಿ ನಕ್ಷದ 1,2,3 ಅಥವ 4 ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಮೀನ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ದಿ ಆದಲ್ಲಿ ಪೂರ್ವಾಭಾದ್ರ ನಕ್ಷತ್ರ, ದು, ಖ, ಝ ಮತ್ತು ಥ ಆದಲ್ಲಿ ಉತ್ತರಾಭಾದ್ರ ನಕ್ಷತ್ರ ಹಾಗು ದೆ, ದೊ, ಚ ಅಥವ ಚಿ ಆದಲ್ಲಿ ರೇವತಿ ನಕ್ಷತ್ರ ಹಾಗು ಮೀನ ರಾಶಿ ಆಗುತ್ತದೆ. ಸೂಕ್ಷ್ಮ ಗುಣವಿರುವ ಮೀನ ರಾಶಿಯವರು ದೃಢ ನಿರ್ಧಾರ ತೆಗೆದುಕೊಳ್ಳದ ಕಾರಣ ಪದೇ ಪದೇ ಸೋಲು ಎದುರಿಸುತ್ತಾರೆ. ಶಾಂತ ಸ್ವಭಾವವಿದ್ದರೂ ಮಾತು ಕಟುವಾಗಿರುತ್ತದೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಅಭಿಲಾಷೆ ಇವರಲ್ಲಿರುತ್ತದೆ. ವಿಲಾಸಿ ಜೀವನ ಇಷ್ಟಪಡುವ ಈ ರಾಶಿಯವರು ಅಂದುಕೊಂಡಿದ್ದನ್ನು ಸಾಧಿಸದೇ ಬಿಡುವುದಿಲ್ಲ.

ಮೀನ ರಾಶಿಯಲ್ಲಿ ಜನಿಸಿರುವ ಮಹಿಳೆಯರಿಗೆ ಕೋಮಲವಾದ ಮನಸ್ಸಿರುತ್ತದೆ. ಯಾರ ಮನಸ್ಸಿಗೂ ನೋವಾಗುವಂತೆ ಮಾತನಾಡುವುದಿಲ್ಲ. ಸೂಕ್ಷ್ಮವಾದ ಗುಣ ಸ್ವಭಾ...