ಭಾರತ, ಜನವರಿ 29 -- ರಾಹುವು ಮಂತ್ರ ಮತ್ತು ಮಾಯೆಗೆ ಅದಿಪತಿ ಆಗಿದ್ದಾನೆ. ಶುಕ್ರ ಸ್ತ್ರೀಗ್ರಹವಾಗುತ್ತದೆ. ಆದ್ದರಿಂದ ಶುಕ್ರನು ರಾಹುವಿನ ಮಾಯೆಗೆ ಒಳಗಾಗುತ್ತದೆ. ರಾಹುವು ಬೃಹತ್ ಪ್ರಮಾಣವನ್ನು ತೋರಿಸುತ್ತದೆ. ಶುಕ್ರ ಗ್ರಹವು ಮೀನದಲ್ಲಿ ಸಾಗುತ್ತದೆ. ರಾಹುವು ಛಾಯಾಗ್ರಹ ಆದ್ದರಿಂದ ಅನಿರೀಕ್ಷಿತ ಶುಭಫಲಗಳು ದೊರೆಯುತ್ತವೆ. ಸ್ತ್ರೀಯರಿಗೆ ವಿಶೇಷವಾದ ಫಲಗಳು ದೊರೆಯುತ್ತವೆ. ಜನವರಿ 28ರ ಮಂಗಳವಾರ ಶುಕ್ರ ಗ್ರಹವು ಮೀನರಾಶಿಯನ್ನು ಪ್ರವೇಶಿಸಿದೆ. ಶುಕ್ರ ಮತ್ತು ರಾಹುವಿನ ಸಂಯೋಗವು ಫೆಬ್ರವರಿ ತಿಂಗಳ 27ರವರೆಗು ಇರುತ್ತದೆ. ಯಾವುದೇ ಗ್ರಹವು ಉಚ್ಚರಾಶಿಯಲ್ಲಿ ಇದ್ದಾಗ ಅಧಿಕವಾಗಿ ಪ್ರತಿ ರಾಶಿಗಳಿಗೂ ಶುಭಫಲಗಳನ್ನು ನೀಡುತ್ತಾನೆ. ಮೇಷದಿಂದ ಕಟಕ ರಾಶಿಯವರಿಗೆ ಶುಭಫಲಗಳನ್ನು ತಿಳಿಯೋಣ.

ಹಣಕಾಸಿನ ತೊಂದರೆಯು ಕಡಿಮೆಯಾಗುತ್ತದೆ. ನಿಮ್ಮ ಮಾತಿಗೆ ಕುಟುಂಬ ಮಾತ್ರವಲ್ಲದೆ ಸಮಾಜದಲ್ಲಿಯೂ ಗೌರವ ಲಭಿಸುತ್ತದೆ. ಖರ್ಚು ವೆಚ್ಚಗಳು ಹೆಚ್ಚಾಗಿದ್ದರೂ ಸಹ ಅದನ್ನು ನಿರ್ವಹಿಸುವ ಚತುರತೆ ನಿಮ್ಮಲ್ಲಿರುತ್ತದೆ. ಕುಟುಂಬದಲ್ಲಿನ ವಿವಾದಗಳು ಬಗೆಹರಿ...