ಭಾರತ, ಮಾರ್ಚ್ 30 -- ಇಲ್ಲಿಯವರೆಗು ತನ್ನ ಸ್ವಕ್ಷೇತ್ರವಾದ ಕುಂಭರಾಶಿಯಲ್ಲಿ ಸಂಚರಿಸುತ್ತಿದ್ದ ಶನಿದೇವನು 2025 ರ ಮಾರ್ಚ್ 29ರ ಶನಿವಾರ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. 2028 ರ ಫೆಬ್ರವರಿ 23ರ ಬುಧವಾರದ ಇವರಿಗೆ ಇಲ್ಲೇ ಇರಲಿದ್ದು, ಆ ನಂತರ ಮೇಷರಾಶಿಯನ್ನು ಪ್ರವೇಶಿಸುತ್ತಾನೆ. ಕುಂಭ, ಮೀನ ಮತ್ತು ಮೇಷ ರಾಶಿಗಳಲ್ಲಿ ಜನಿಸಿದವರಿಗೆ ಶನಿಕಾಟ ಇರುತ್ತದೆ. ಆದರೆ ಶನಿ ಇರುವ ರಾಶಿಯನ್ನು ಮಾತ್ರ ಪರಿಗಣಿಸುವುದು ಅಪೂರ್ಣವೆನಿಸುತ್ತದೆ. ಶನಿಯ ದೃಷ್ಟಿಯೂ ಬಹುಮುಖ್ಯ ಎನಿಸುತ್ತದೆ. ಶನಿಯ ದೃಷ್ಟಿಯ ಬಗ್ಗೆ ಅನೇಕ ಕತೆಗಳು ನಮಗೆ ಸಿಗುತ್ತವೆ. ಉದಾಹರಣೆಗೆ ರಾವಣೇಶ್ವರನು ನವಗ್ರಹಗಳನ್ನು ತನ್ನ ಸಿಂಹಾಸನದ ಮೆಟ್ಟಿಲುಗಳನ್ನಾಗಿ ಮಾಡಿಕೊಂಡಿರುತ್ತಾನೆ. ರಾವಣನ ಆಸ್ಥಾನಕ್ಕೆ ಆಗಮಿಸಿದ ನಾರದ ಮಹರ್ಷಿಗಳು ರಾವಣನನ್ನು ನಿನ್ನಂತ ವೀರರು ನವಗ್ರಹಗಳ ಬೆನ್ನನ್ನು ತುಳಿಯಬಾರದು. ಅದರ ಬದಲಾಗಿ ನವಗ್ರಹಗಳ ಎದೆಯನ್ನು ಮೆಟ್ಟಿ ಸಿಂಹಾಸನವನ್ನು ಏರಬೇಕು ಎನ್ನುತ್ತಾರೆ. ನಾರದರ ಮಾತಿನ ಆಂತರ್ಯವನ್ನು ಅರಿಯದ ರಾಣವನ್ನು ತನ್ನನ್ನು ಯಾರಿಂದಲೂ ಗೆಲ್ಲಲ...