ಭಾರತ, ಫೆಬ್ರವರಿ 7 -- ಮರ್ಲಿನ್ ಮನ್ರೋ ಗೆಟಪ್‌ನಲ್ಲಿ ಪಟ್ಟಾಪಟ್ಟಿ ಚಡ್ಡಿ ಹಾಕಿ ನಿಂತ "ಮಿಸ್ಟರ್ ರಾಣಿ' ಪೋಸ್ಟರ್ ನೋಡಿ ಸಾಕಷ್ಟು ಜನ ಈ ಸಿನಿಮಾ ನೋಡಬೇಕೆಂದು ನಿರ್ಧರಿಸಿರುತ್ತಾರೆ. ಅಷ್ಟೇ ಅಲ್ಲದೆ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟ ದೀಪಕ್ ಜಯಂತ್ ಪಾತ್ರದಲ್ಲಿ ಅಭಿನಯಿಸಿದ್ದು, ಅವರನ್ನು ಸ್ತ್ರೀ ವೇಷದಲ್ಲಿ ಕಾಣಬೇಕು ಎಂಬ ಹಂಬಲದಿಂದಲೂ ಸಾಕಷ್ಟು ಜನ ಈ ಸಿನಿಮಾ ಬಗ್ಗೆ ಕುತೂಹಲ ಇಟ್ಟುಕೊಂಡಿರುತ್ತಾರೆ. ಸಿನಿಮಾದ ಟೈಟಲ್ ಕಾರ್ಡ್ ಆರಂಭದಲ್ಲೇ ಎಷ್ಟೊಂದು ಸಿನಿಮಾಗಳಲ್ಲಿ ನಾಯಕ ನಟರು ಸ್ತ್ರೀ ವೇಷದಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದರು ಎಂಬುದನ್ನು ತೋರಿಸಲಾಗಿದೆ. ಕನ್ನಡ ಚಿತ್ರರಂಗದ ಮೇರು ನಟರಾದ ವಿಷ್ಣುವರ್ದನ್, ಅಂಬರೀಷ್, ಶಿವರಾಜ್ ಕುಮಾರ್, ಜಗ್ಗೇಶ್‌, ಶರಣ್, ಉಪೇಂದ್ರ ಹಾಗೂ ಇನ್ನಿತರ ಭಾಷೆಯ ಸಾಕಷ್ಟು ಕಲಾವಿದರು ಸ್ತ್ರೀವೇಷದಲ್ಲಿ ಯಾವ ರೀತಿ ಕಾಣುತ್ತಿದ್ದರು ಎಂಬುದನ್ನು ತೋರಿಸುತ್ತಾ ಸಿನಿಮಾ ಆರಂಭವಾಗುತ್ತದೆ.

ದೀಪಕ್ ಈ ಸಿನಿಮಾದ ನಾಯಕ ಹಾಗೂ ನಾಯಕಿ ಎರಡೂ ಆಗಿದ್ದಾರೆ. ಸಿನಿಮಾದುದ್ದಕ್ಕೂ ನಮ್ಮನ್ನು ಒಂದೇ ರೀ...