ಭಾರತ, ಮಾರ್ಚ್ 26 -- ಮಿಯಾಮಿ ಓಪನ್ ಟೆನ್ನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ 16ನೇ ಸುತ್ತಿನಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಕ್‌ ಅವರು 6-2, 6-2 ಅಂತರದಲ್ಲಿ ಇಟಲಿಯ ಲೊರೆಂಜೊ ಮುಸೆಟ್ಟಿ ಅವರನ್ನು ಒಂದು ಗಂಟೆ 22 ನಿಮಿಷಗಳ ಪಂದ್ಯದಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ವಿಶ್ವದ 15ನೇ ಶ್ರೇಯಾಂಕದ ಮುಸೆಟ್ಟಿ ಮೊದಲ ಸೆಟ್‌ನಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ಇದರ ನಂತರ 9 ಗೇಮ್‌ ಸೋತು ಸೆಟ್​ ಅನ್ನೇ ಕಳೆದುಕೊಂಡರು. ಆತ್ಮವಿಶ್ವಾಸ ಮತ್ತು ಚುರುಕಾಗಿ ಆಡಿದ ಜೋಕೋವಿಕ್​ 2016ರ ನಂತರ ಕ್ವಾರ್ಟರ್​ ಫೈನಲ್​ಗೆ ತಲುಪಿದ್ದಾರೆ.

ಮೈಯಾಮಿ ಓಪನ್‌ನಲ್ಲಿ 6 ಬಾರಿ ಚಾಂಪಿಯನ್ ಆಗಿರುವ ಜೊಕೊವಿಕ್, ಮತ್ತೊಂದು ಪ್ರಶಸ್ತಿ ಮುಖ ಮಾಡಿದ್ದಾರೆ. ಇಲ್ಲಿ 2016ರಲ್ಲಿ ಕೊನೆಯದಾಗಿ ಮಿಯಾಮಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು. 37 ವರ್ಷದ ದಿಗ್ಗಜ ತಮ್ಮ 100ನೇ ಕೆರಿಯರ್ ಟೂರ್ ಟೈಟಲ್ ಗೆಲ್ಲಲು ಇನ್ನೂ 3 ಗೆಲುವು ಬೇಕಾಗಿದೆ. ಪಂದ್ಯದ ಆರಂಭ ಮುಸೆಟ್ಟಿಗೆ ತುಂಬಾ ಉತ್ತಮವಾಗಿತ್ತು. ಮೊದಲ 2 ಗೇಮ್‌ಗಳಲ್ಲಿ ನಾನ...