ಭಾರತ, ಮಾರ್ಚ್ 3 -- ಮಿಥುನ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಮೃಗಶಿರ ನಕ್ಷತ್ರದ 3 ಮತ್ತು 4ನೇ ಪಾದಗಳು, ಆರ್ದ್ರಾ (ಆರಿದ್ರಾ) ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಪುನರ್ವಸು ನಕ್ಷತ್ರದ 1, 2 ಮತ್ತು 3ನೇ ಪಾದದಲ್ಲಿ ಜನಿಸಿದ್ದರೆ ನಿಮ್ಮದು ಮಿಥುನ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಕ, ಕಿ ಆದಲ್ಲಿ ಮೃಗಶಿರ ನಕ್ಷತ್ರ. ಕು, ಘ, ಜ್ಞ, ಛ ಆದಲ್ಲಿ ಆರ್ದ್ರಾ ನಕ್ಷತ್ರ. ಕೆ, ಕೊ, ಹ ಆಗಿದ್ದಲ್ಲಿ ಪುನರ್ವಸು ನಕ್ಷತ್ರ ಮತ್ತು ಮಿಥುನ ರಾಶಿ ಆಗುತ್ತದೆ ಎಂದು ತಿಳಿಯಬೇಕು. 12 ರಾಶಿಗಳಿರುವ ರಾಶಿ ಚಕ್ರದಲ್ಲಿ 3ನೇ ರಾಶಿ ಮಿಥುನ. ಈ ರಾಶಿ ಚಕ್ರದ ಚಿಹ್ನೆ ಗಂಡು-ಹೆಣ್ಣು. ಹೀಗಾಗಿ ಎರಡೂ ಲಿಂಗಗಳ ಸ್ವಭಾವವೂ ಇವರಲ್ಲಿ ಮೈಗೂಡಿರುತ್ತದೆ. ದ್ವಂದ್ವ ಮನಸ್ಸು, ನಿರ್ಧಾರಗಳನ್ನು ಆಗಾಗ ಬದಲಿಸುವ ಮನಸ್ಥಿತಿ ಈ ರಾಶಿಯವರ ಸಾಮರ್ಥ್ಯವೂ ಹೌದು, ದೌರ್ಬಲ್ಯವೂ ಹೌದು. ಮಿಥುನ ರಾಶಿಯ ಈ ವರ್ಷದ ಭವಿಷ್ಯ ಹೇಗಿದೆ ಎನ್ನುವುದನ್ನು ಮುಂದೆ ತಿಳಿಯೋಣ.

ಮಿಥುನ ರಾಶಿಯ ಮಹಿಳೆಯರು ಸಾಮಾನ್ಯವಾಗಿ ಬುದ್ಧಿವಂತರಾಗಿರುತ್ತಾರೆ. ಯಾವುದ...