Bengaluru, ಮೇ 28 -- ರವಿಯು 2025ರ ಜೂನ್ 15 ರ ಭಾನುವಾರದಿಂದ ಜುಲೈ 16 ರ ಬುಧವಾರದವರೆಗು ಮಿಥುನ ರಾಶಿಯಲ್ಲಿ ಸಂಚರಿಸುತ್ತಾನೆ. ಸೂರ್ಯನ ಈ ಸಂಚಾರದಿಂದ ದಾಂಪತ್ಯ ಜೀವನದ ಬಗ್ಗೆ ತಿಳಿಯಬಹುದು. ಪಾಲುಗಾರಿಕೆಯ ವ್ಯಾಪಾರ, ಸ್ಟಾಕ್ ಮತ್ತು ಷೇರಿನ ವ್ಯವಹಾರದ ಬಗ್ಗೆಯೂ ಇದರಿಂದ ತಿಳಿಯಬಹುದು. ಇದೇ ರಾಶಿಯಲ್ಲಿ ಗುರುವು ಸಂಚರಿಸುವ ಕಾರಣ ತಂದೆ ಮತ್ತು ಮಕ್ಕಳ ನಡುವಿನ ಸಂಬಂಧವನ್ನು ತಿಳಿಯಬಹುದು. ಗುರು ಹಿರಿಯರನ್ನು ಭೇಟಿಮಾಡುವ ಸಾಧ್ಯಾಸಾಧ್ಯತೆಯನ್ನು ಸೂಚಿಸುತ್ತದೆ. ನಮ್ಮ ಬುದ್ಧಿವಂತಿಕೆಯ ಪ್ರಯೋಜನ ಈ ತಿಂಗಳಲ್ಲಿ ಬಹುಮುಖ್ಯವಾಗುತ್ತದೆ. ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಸೂರ್ಯ ಸಂಚಾರದಿಂದ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ತಿಳಿಯೋಣ.

ಕೌಟುಂಬಿಕ ಜೀವನದಲ್ಲಿ ಆಸಹನೀಯ ಘಟನೆಗಳು ಎದುರಾಗುತ್ತವೆ. ಬಾಳ ಸಂಗಾತಿಗೆ ಅನಾರೋಗ್ಯ ಇರಲಿದೆ. ತಾಯಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದರು, ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ನಿಮ್ಮ ಸ್ವಂತ ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕಗಳು ಎದುರಾಗುತ್ತವೆ. ಉತ್ತಮ ಆದಾಯವಿರುತ್ತದ...