Bengaluru, ಮೇ 28 -- ರವಿಯು 2025ರ ಜೂನ್ 15 ರ ಭಾನುವಾರದಿಂದ ಜುಲೈ 16 ರ ಬುಧವಾರದವರೆಗು ಮಿಥುನ ರಾಶಿಯಲ್ಲಿ ಸಂಚರಿಸುತ್ತಾನೆ. ಸೂರ್ಯನ ಈ ಸಂಚಾರದಿಂದ ದಾಂಪತ್ಯ ಜೀವನದ ಬಗ್ಗೆ ತಿಳಿಯಬಹುದು. ಪಾಲುಗಾರಿಕೆಯ ವ್ಯಾಪಾರ, ಸ್ಟಾಕ್ ಮತ್ತು ಷೇರಿನ ವ್ಯವಹಾರದ ಬಗ್ಗೆಯೂ ಇದರಿಂದ ತಿಳಿಯಬಹುದು. ಇದೇ ರಾಶಿಯಲ್ಲಿ ಗುರುವು ಸಂಚರಿಸುವ ಕಾರಣ ತಂದೆ ಮತ್ತು ಮಕ್ಕಳ ನಡುವಿನ ಸಂಬಂಧವನ್ನು ತಿಳಿಯಬಹುದು. ಗುರು ಹಿರಿಯರನ್ನು ಭೇಟಿಮಾಡುವ ಸಾಧ್ಯಾಸಾಧ್ಯತೆಯನ್ನು ಸೂಚಿಸುತ್ತದೆ. ನಮ್ಮ ಬುದ್ಧಿವಂತಿಕೆಯ ಪ್ರಯೋಜನ ಈ ತಿಂಗಳಲ್ಲಿ ಬಹುಮುಖ್ಯವಾಗುತ್ತದೆ. ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಸೂರ್ಯ ಸಂಚಾರದಿಂದ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ತಿಳಿಯಿರಿ.

ಸಮಯ ಸಂದರ್ಭವನ್ನು ಅರ್ಥೈಸಿಕೊಂಡು ಜೀವನದಲ್ಲಿ ಮುಂದುವರೆಯುವಿರಿ. ನಿಮ್ಮ ಮನಸ್ಸನ್ನು ಅರಿತುಕೊಳ್ಳಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ನಿಮ್ಮಲ್ಲಿ ಅಸಾಧಾರಣ ಧೈರ್ಯ ಸಾಹಸದ ಗುಣ ಇರುತ್ತದೆ. ಧಾರ್ಮಿಕ ಗುರುಗಳನ್ನು ಭೇಟಿಮಾಡುವ ಅವಕಾಶ ದೊರೆಯುತ್ತದೆ. ನಿಮ್ಮ ತೀರ್ಮಾನ...