ಭಾರತ, ಮಾರ್ಚ್ 14 -- ದೊಡ್ಡಬಳ್ಳಾಪುರ: ಜ್ಞಾನಪೀಠ ಪುರಸ್ಕೃತ ಡಾ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದರಾ ಬೇಂದ್ರೆ) ಅವರ ನಾಕುತಂತಿ ಕವನ ಸಂಕಲನ ಪ್ರಕಟವಾಗಿ 60 ವರ್ಷಗಳಾಗಿವೆ. 'ವರಕವಿ'ಗೆ ಜ್ಞಾನಪೀಠ ಪುರಸ್ಕಾರ ದೊರೆತು 50 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ 'ನಾಕುತಂತಿ ಷಷ್ಟಿಪೂರ್ತಿ' ಕಾರ್ಯಕ್ರಮವನ್ನು 'ಅಖಿಲ ಭಾರತೀಯ ಸಾಹಿತ್ಯ ಪರಿಷದ್' ನಗರದ ಮಂಗಳ ಶಾಲೆಯಲ್ಲಿ ಭಾನುವಾರ (ಮಾರ್ಚ್ 16) ಬೆಳಿಗ್ಗೆ 9:30 ಕ್ಕೆ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಖ್ಯಾತ ಸಂಸ್ಕೃತಿ ಚಿಂತಕ, ಕವಿ, ಕಾದಂಬರಿಕಾರ ಡಾ ಜಿ.ಬಿ.ಹರೀಶ ಅವರು ಮುಖ್ಯ ಉಪನ್ಯಾಸ ನೀಡಲಿದ್ದಾರೆ. ಸಂಗೀತ ಕಲಾವಿದೆ ರಮ್ಯಾ ವಸಿಷ್ಠ ಅವರು ಬೇಂದ್ರೆ ಅವರ ಹಲವು ಅಪರೂಪದ ಕವನಗಳನ್ನು ಹಾಡಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಂದ್ರ ಕಲ್ಚರಲ್ ಫೌಂಡೇಶನ್ ಈ ಕಾರ್ಯಕ್ರಮಕ್ಕೆ ಸಹಕರಿಸುತ್ತಿವೆ. ದೊಡ್ಡಬಳ್ಳಾಪುರದ ಲೇಖಕಿ ಪ್ರಭಾ, ಶಿಕ್ಷಕಿ ಯಶೋದಾ ಅವರು ಬೇಂದ್ರೆ ಕವನಗಳನ್ನು ವಾಚಿಸಲಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಬೆಂಗಳೂರು ಮಹಾನಗರ ಸಮಿತಿಯ ಅಧ್ಯಕ...