ಭಾರತ, ಮಾರ್ಚ್ 12 -- ಬೆಂಗಳೂರು: ಕೈ ಮಗ್ಗದ ಸೀರೆಗಳು ಅಂದರೆ ಬಹಳ ಇಷ್ಟಾನಾ, ಕೇರಳ, ತಮಿಳುನಾಡು, ಆಂಧ್ರ ಹೀಗೆ ದೇಶದ ವಿವಿಧ ರಾಜ್ಯಗಳ ಕೈ ಮಗ್ಗದ ಸೀರೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿ, ಇದೊಂದು ಸೀರೆ ನನ್ನ ಕಲೆಕ್ಷನ್‌ನಲ್ಲಿ ಇರಬೇಕಿತ್ತು ಅಂತ ಬಯಸಿದ್ರಾ. ಹಾಗಾದ್ರೆ ಇಲ್ಲೊಂದು ಶುಭ ಸುದ್ದಿ ಇದೆ. ಹೌದು ಜೆಪಿ ನಗರದ ಶುಭ್ ಕನ್ವೆನ್ಶನ್ ಸೆಂಟರ್‌ನಲ್ಲಿ ಮಾ 14 ರಿಂದ ಒಂದು ವಾರ ಬೆಂಗಳೂರು ಸೀರೆ ಉತ್ಸವ ಶುರುವಾಗಲಿದೆ. ಲಕ್ಷಾಂತರ ಕೈಮಗ್ಗ ಸೀರೆಗಳ ಪ್ರದರ್ಶನ ಮಾರಾಟ ಇರಲಿದ್ದು, ನಿಮಗಿಷ್ಟವಾಗುವ ಸೀರೆಗಳೂ ಸಿಗಬಹುದು ನೋಡಿ.

ಬೆಂಗಳೂರು ಜೆಪಿ ನಗರದ ಶುಭ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾ.14 ರಿಂದ 20ರವರೆಗೆ ಬೆಂಗಳೂರು ಸೀರೆ ಉತ್ಸವ ನಡೆಯಲಿದೆ. ರಾಷ್ಟ್ರೀಯ ವಿನ್ಯಾಸ ಕೇಂದ್ರ (ಎನ್‌ಡಿಸಿ), ಮತ್ತು ಕೇಂದ್ರ ಜವಳಿ ಸಚಿವಾಲಯದ ಕೈಮಗ್ಗ ಅಭಿವೃದ್ಧಿ ಆಯುಕ್ತಾಲಯದ ಸಹಯೋಗದಲ್ಲಿ ಈ ಉತ್ಸವ ನಡೆಯುತ್ತದೆ. ಪ್ರತಿದಿನ ಬೆಳಗ್ಗೆ 11 ರಿಂದ ರಾತ್ರಿ 8 ಗಂಟೆಯವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಬೆಂಗಳೂರು ಸೀರೆ ಉತ್ಸ...