ಭಾರತ, ಮೇ 23 -- ಮೇ 7ರಂದು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇದು ಅಭಿಮಾನಿಗಳನ್ನು ಅಚ್ಚರಿಗೆ ದೂಡಿತು. ಜೂನ್ 20ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುಂಚಿತವಾಗಿ ಭಾರತದ ಮಾಜಿ ನಾಯಕನ ಹಠಾತ್ ನಿರ್ಧಾರವು ಹಲವು ಗೊಂದಲಗಳಿಗೆ ಕಾರಣವಾಗಿದ್ದು ಸುಳ್ಳಲ್ಲ. ಮಹತ್ವದ ಸರಣಿಯಿದ್ದರೂ, ಅದಕ್ಕೂ ಮುನ್ನ ದಿಢೀರನೆ ಹಿಟ್‌ಮ್ಯಾನ್‌ ಇಂಥಾ ನಿರ್ಧಾರ ತೆಗೆದುಕೊಂಡಿದ್ದೇಕೆ ಎಂಬುದೇ ಹಲವರ ಪ್ರಶ್ನೆ. ವರದಿಯ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರೋಹಿತ್ ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದೇ, ರೋಹಿತ್‌ ಟೆಸ್ಟ್ ಕ್ರಿಕೆಟ್‌ನಿಂದ ದೂರವಿರಲು ಕಾರಣವಾಯಿತಂತೆ.

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರು 2014ರಲ್ಲಿ ನಿವೃತ್ತಿ ಘೋಷಿಸಿದಂತೆ, ಅದೇ ರೀತಿ ತಮ್ಮ ವಿದಾಯಕ್ಕೆ ಸಂಬಂಧಿಸಿದ ಪ್ರಸ್ತಾಪವನ್ನು ರೋಹಿತ್ ಶರ್ಮಾ ಬಿಸಿಸಿಐಗೆ ಮಾಡಿದ್ದರು. ಆದರೆ ಬಿಸಿಸಿಐ ಅದನ್ನು ತಿರಸ್ಕರಿಸಿತು ಎಂದು ಸ್ಕೈ ಸ್ಪೋರ್ಟ್ಸ್ ನ್ಯೂಸ್ ವರದಿ ಮಾಡಿದೆ...