ಭಾರತ, ಮೇ 25 -- ಸದ್ಯ ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವಿನಹಣ್ಣಿನದ್ದೇ ದರ್ಬಾರು. ಈ ಹಣ್ಣಿನ ರುಚಿ, ಘಮಕ್ಕೆ ಮನ ಸೋಲದವರಿಲ್ಲ. ಈ ತಿಂಗಳಲ್ಲಿ ಬಗೆ ಬಗೆಯ ಮಾವು ಮಾರುಕಟ್ಟೆಗೆ ಕಾಲಿಡುತ್ತದೆ. ನೀವು ಕೂಡ ಮಾವು ಖುಷಿ ಎನ್ನುವ ಕಾರಣಕ್ಕೆ ವಿವಿಧ ಬಗೆಯ ಮಾವಿನ ಹಣ್ಣು ತಂದು ಇರಿಸಿಕೊಂಡಿರಬಹುದು. ಆದರೆ ಮಾವಿನ ಹಣ್ಣು ತಿಂದ ಮೇಲೆ ತಪ್ಪಿಯೂ ಈ ಕೆಲವು ಆಹಾರಗಳನ್ನು ತಿನ್ನಬಾರದು, ಇದರಿಂದ ಆರೋಗ್ಯಕ್ಕೆ ಹಾನಿ ಖಚಿತ.

ಮೊಸರು: ಜನರು ಮಾವು ಮತ್ತು ಮೊಸರನ್ನು ಒಟ್ಟಿಗೆ ತಿನ್ನಲು ಇಷ್ಟಪಡುತ್ತಾರೆ, ಆದರೆ ಈ ಆಹಾರ ಸಂಯೋಜನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ಎರಡೂ ಆಹಾರಗಳನ್ನು ಒಟ್ಟಿಗೆ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.

ಹಾಗಲಕಾಯಿ: ಬೇಸಿಗೆಯಲ್ಲಿ ಹೆಚ್ಚು ಇಷ್ಟಪಡುವ ತರಕಾರಿಗಳಲ್ಲಿ ಹಾಗಲಕಾಯಿ ಕೂಡ ಒಂದು. ಆದರೆ, ಮಾವಿನ ಹಣ್ಣು ತಿಂದ ನಂತರ ಅದನ್ನು ತಿನ್ನಬಾರದು ಎಂಬ ಅಂಶವನ್ನು ಎಚ್ಚರಿಕೆಯಿಂದ ಗಮನಿಸಬೇಕು. ಈ ಎರಡು ಆಹಾರಗಳನ್ನು ಒಟ್ಟಿಗೆ ಸೇವಿಸಿದರೆ ವಾಕರಿಕೆ ಮತ್ತು ವಾಂತಿಯಂತಹ ಸಮಸ...