Bangalore, ಏಪ್ರಿಲ್ 18 -- ಬೆಂಗಳೂರು: ಈಗಾಗಲೇ ಮಾವಿನ ಹಣ್ಣು ಮಾರುಕಟ್ಟೆ ಪ್ರವೇಶಿಸಿವೆ. ಕರ್ನಾಟಕದ ನಾನಾ ಜಿಲ್ಲೆಗಳು ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಮಾವಿನ ಹಣ್ಣು ಮಾರಾಟಕ್ಕೆ ಲಭ್ಯವಿದೆ. ಆದರೆ ಮಾವಿನ ಹಣ್ಣು ಗ್ರಾಹಕರಿಗೆ ಮನೆಗೆ ತಲುಪಬೇಕು. ಗುಣಮಟ್ಟದ ಮಾವಿನಹಣ್ಣನ್ನು ಕರ್ನಾಟಕದವರು ಬಳಸುವಂತಾಗಬೇಕು ಎನ್ನುವ ಕಾರಣದಿಂದಲೇ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ (KSMDMCL) ವೆಬ್‌ಸೈಟ್‌ ಪೋರ್ಟಲ್‌ ಅನ್ನು ಆರಂಭಿಸಿ ಬೆಳೆಗಾರರು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದೆ. ಈ ವರ್ಷವೂ ವೆಬ್‌ಸೈಟ್‌ ಅನ್ನು ಈಗಿನ ಬೇಡಿಕೆಗೆ ಪೂರಕವಾಗಿ ಅಭಿವೃದ್ದಿಪಡಿಸಿ ಮಾವಿನ ಮಾರಾಟಕ್ಕೆ ನಿಗಮವು ವೇದಿಕೆ ಕಲ್ಪಿಸಲು ಮುಂದಾಗಿದೆ. ಮುಂದಿನ ವಾರದ ಹೊತ್ತಿಗೆ ವೆಬ್‌ಸೈಟ್‌ ಬಳಕೆಗೆ ಲಭ್ಯವಾಗಬಹುದು ಎಂದು ನಿಗಮ ತಿಳಿಸಿದೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ಕರ್ನಾಟಕದ ಆನ್‌ಲೈನ್ ಮಾವಿನ ಮಾರಾಟದ ರಸಭರಿತ ಬೆಳವಣಿಗೆ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ (...