ಭಾರತ, ಏಪ್ರಿಲ್ 19 -- ಮಾವಿನ ಕಾಯಿ ಉಪ್ಪಿನಕಾಯಿ, ಅಮಟೆಕಾಯಿ ಉಪ್ಪಿನಕಾಯಿ, ನಿಂಬೆಹುಳಿ ಉಪ್ಪಿನಕಾಯಿ ಹೀಗೆ ವಿವಿಧ ಬಗೆಯ ಉಪ್ಪಿನಕಾಯಿಗಳನ್ನು ನೀವು ಊಟದ ಜೊತೆ ಸವಿದಿರಬಹುದು. ಆದರೆ ನಾಲಿಗೆಗೆ ಹೊಸ ರುಚಿ ನೀಡಬಲ್ಲ ಮಾವಿನಹಣ್ಣಿನ ಉಪ್ಪಿನಕಾಯಿಯನ್ನು ಎಂದಾದರೂ ತಿಂದಿದ್ದೀರಾ? ಉಪ್ಪು, ಹುಳಿ, ಸಿಹಿಯ ಜೊತೆಗೆ ಖಾರವೂ ಸಮ ಪ್ರಮಾಣದಲ್ಲಿರುವ ಮಾವಿನಹಣ್ಣಿನ ಉಪ್ಪಿನಕಾಯಿ, ದಕ್ಷಿಣ ಕನ್ನಡ ಹಾಗೂ ಉತ್ತರಕನ್ನಡದ ಹಲವೆಡೆ ಮಾವಿನ ಸೀಸನ್‌ನಲ್ಲಿ ತಪ್ಪದೇ ಮಾಡುತ್ತಾರೆ. ಅಯ್ಯೋ ಇದೇನಿದು, ಮಾವಿನ ಹಣ್ಣಿನಿಂದ ಉಪ್ಪಿನಕಾಯಿಯೇ, ಇದು ಸಿಹಿ ಇರೋದಿಲ್ವಾ ಅಂತ ಮೂಗು ಮುರಿಯಬೇಡಿ. ಇದರ ರುಚಿ ನೋಡಿದ ಮೇಲೆ ನೀವು ಮೂಗಿನ ಮೇಲೆ ಬೆರಳು ಇರಿಸಿಕೊಳ್ಳೋದು ಖಂಡಿತ.

ಈ ಮಾವಿನ ಹಣ್ಣಿನ ಉಪ್ಪಿನಕಾಯಿ ತಯಾರಿಸಲು ಯಾವ ಮಾವಿನಹಣ್ಣು ಬಳಸುತ್ತಾರೆ. ರುಚಿಕರವಾದ ಈ ಉಪ್ಪಿನಕಾಯಿ ತಯಾರಿಸುವ ವಿಧಾನ ಹೇಗೆ, ಇಂತಹ ಅನೇಕ ಪ್ರಶ್ನೆಗಳು ಈಗಾಗಲೇ ನಿಮ್ಮನ್ನು ಕಾಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಸಾಮಾನ್ಯವಾಗಿ ಮಾವಿನಹಣ್ಣಿನ ಉಪ್ಪಿನಕಾಯಿ ತಯಾರಿಸಲು...