Bengaluru, ಜನವರಿ 28 -- Bhagyalakshmi Serial: ತಾಂಡವ್‌ ಮನೆಗೆ ವಾಪಸ್‌ ಬಂದಿದ್ದಾನೆ ಎಂದು ಕುಸುಮಾ, ಸುನಂದಾ ಖುಷಿ ಆದರೂ, ಅದು ಹೆಚ್ಚು ಸಮಯ ನಿಲ್ಲುವುದಿಲ್ಲ. ತನ್ನ ವಸ್ತುಗಳನ್ನು ತೆಗೆದುಕೊಂಡು ಹೋಗುವ ನೆಪದಲ್ಲಿ ಮನೆಗೆ ಬಂದ ತಾಂಡವ್‌ ಕುಸುಮಾ, ಸುನಂದಾ ಇಬ್ಬರ ಬ್ರೈನ್‌ ವಾಶ್‌ ಮಾಡಲು ಪ್ರಯತ್ನಿಸುತ್ತಾನೆ. ಬೆಳಗ್ಗಿನಿಂದ ಏನೂ ಸರಿಯಾಗಿ ತಿನ್ನದೆ ಭಾಗ್ಯಾ ಮಾಡಿದ ಅಡುಗೆಯನ್ನೇ ಹೊಟ್ಟೆ ತುಂಬಾ ತಿಂದು ಮತ್ತೆ ಶ್ರೇಷ್ಠಾ ಇರುವ ಕಡೆ ಹೊರಡುತ್ತಾನೆ.

ತಾನು ಮಾಡಿದ ಊಟ ತಿನ್ನುವಂತೆ ಶ್ರೇಷ್ಠಾ ಬಲವಂತ ಮಾಡಿದಾಗ ತಾನು ಮನೆಗೆ ಹೋಗಿದ್ದು, ಅಲ್ಲಿ ಊಟ ಮಾಡಿದ ವಿಚಾರ ಎಲ್ಲವನ್ನೂ ಹೇಳುತ್ತಾನೆ. ಮೊದಲು ಶ್ರೇಷ್ಠಾ ಕೋಪಗೊಂಡರೂ, ಕುಸುಮಾ ಹಾಗೂ ಸುನಂದಾ ತಾಂಡವ್‌ ಪರ ಮಾತನಾಡಿದ ವಿಚಾರ ಕೇಳಿ ಸುಮ್ಮನಾಗುತ್ತಾಳೆ. ಭಾಗ್ಯಾ ಬಹಳ ಮೆರೆಯುತ್ತಿದ್ದಾಳೆ. ನನ್ನ ಅಪ್ಪನಿಗೆ ಕಾರು ಕೊಡಿಸುತ್ತಿದ್ದಾಳೆ. ಎಲ್ಲರ ಎದುರು ಹೀರೋಯಿನ್‌ ಆಗಲು ಹೊರಟಿದ್ದಾಳೆ, ಅವಳ ಅಹಂಕಾರ ಇಳಿಸಬೇಕು, ಅಪ್ಪ ಅಮ್ಮ ಅವಳನ್ನು ಮನೆಯಿಂದ ಹೊರಹಾಕುವಂತೆ ಮಾಡಬೇಕ...