Bengaluru, ಜನವರಿ 29 -- Bhagyalakshmi Serial: ಆಫೀಸ್‌ಗೆ ಹೊರಡುವ ಗಡಿಬಿಡಿಯಲ್ಲಿದ್ದ ತಾಂಡವ್, ಶ್ರೇಷ್ಠಾಳ ಬಳಿ ತನ್ನ ಬ್ಯಾಗ್ ಕೊಡುವಂತೆ ಕೇಳುತ್ತಾನೆ. ಒಮ್ಮೆ ಕರೆದಾಗ ಉತ್ತರ ಬರುವುದಿಲ್ಲ, ಹೀಗಾಗಿ ಮತ್ತೊಮ್ಮೆ ಕರೆಯುತ್ತಾನೆ. ಜೋರಾಗಿ ಕರೆದರೂ ಶ್ರೇಷ್ಠಾಳ ಪತ್ತೆಯಿರುವುದಿಲ್ಲ. ಹೀಗಾಗಿ ಅವಳನ್ನು ಹುಡುಕಿಕೊಂಡು ಮನೆಯೆಲ್ಲಾ ಸುತ್ತುತ್ತಾನೆ. ಆಗ ಶ್ರೇಷ್ಠಾ ಅವನಲ್ಲಿ ಹೇಳದೇ ಹೊರಗೆ ಹೋಗಿರುವುದು ಗೊತ್ತಾಗುತ್ತದೆ. ಅದು ತಾಂಡವ್‌ಗೆ ತೀವ್ರ ಕೋಪ ತರಿಸುತ್ತದೆ. ಹಾಗೆಯೇ ಕಿಚನ್‌ಗೆ ಹೋಗುವಾಗ ಅಲ್ಲಿ ನೀರು ಚೆಲ್ಲಿದ್ದು, ಅದರ ಮೇಲೆ ಕಾಲಿಟ್ಟ ತಾಂಡವ್ ಜಾರಿ ಸ್ಟೇರ್‌ಕೇಸ್ ಮೇಲೆ ಬೀಳುತ್ತಾನೆ. ಆತನ ಕೈಗೆ ಗಾಯವಾಗುತ್ತದೆ. ಶ್ರೇಷ್ಠಾಳನ್ನು ಶಪಿಸುತ್ತಾ, ಕೈ ನೋವಿನಿಂದಲೇ ಆಕೆಗೆ ಕರೆ ಮಾಡುತ್ತಾನೆ. ಫೋನ್ ರಿಂಗ್ ಆದರೂ ಶ್ರೇಷ್ಠಾ ಕರೆ ಸ್ವೀಕರಿಸುವುದಿಲ್ಲ. ಹೀಗಾಗಿ ಮತ್ತೊಮ್ಮೆ ಕರೆ ಮಾಡುತ್ತಾನೆ. ಆಗಲೂ ಶ್ರೇಷ್ಠಾ ಕರೆಗೆ ಉತ್ತರಿಸುವುದಿಲ್ಲ. ಇದರಿಂದ ತಾಂಡವ್‌ಗೆ ಮತ್ತಷ್ಟು ಕೋಪ ಬರುತ್ತದೆ.

ಇತ್ತ ಕಡೆ ಶ್ರೇಷ್ಠಾ, ಭಾ...