ಭಾರತ, ಫೆಬ್ರವರಿ 1 -- ನಟ ಶಿವರಾಜ್‌ಕುಮಾರ್‌ ಪತ್ನಿ ಗೀತಾ ಶಿವರಾಜ್‌ ಕುಮಾರ್ ಅವರು ಶಾಸಕ ಭೀಮಣ್ಣ ನಾಯ್ಕ್‌ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವಿಶೇಷವಾದ ಪೋಸ್ಟ್‌ ಹಂಚಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಅವರ ಅನಾರೋಗ್ಯದ ಸಂದರ್ಭದಲ್ಲಿ ಸಹಕರಿಸಿದ ಭೀಮಣ್ಣ ನಾಯ್ಕ್‌ ಅವರ ಬಗ್ಗೆ ಕೆಲ ಸಂಗತಿಗಳನ್ನು ಬರೆದು ಧನ್ಯವಾದ ತಿಳಿಸಿದ್ದಾರೆ. ನಟ ಶಿವರಾಜ್‌ಕುಮಾರ್‌ ಅವರು ಅಮೆರಿಕದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಮತ್ತೆ ಭಾರತಕ್ಕೆ ಮರಳಿದ್ದಾರೆ. ಈ ಸಂದರ್ಭದಲ್ಲಿ ಸಾಕಷ್ಟು ಜನ ಶಿವಣ್ಣನ ಆರೋಗ್ಯ ವಿಚಾರಿಸುತ್ತಿದ್ದಾರೆ. ಈ ಹಿಂದೆಯೂ ಅವರ ಆರೋಗ್ಯದ ಬಗ್ಗೆ ಗೀತಾ ಶಿವರಾಜ್ ಕುಮಾರ್ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಅದೇ ರೀತಿ ಅಮೇರಿಕಾದಲ್ಲಿ ಕಳೆದ ಆ ದಿನಗಳ ಬಗ್ಗೆ ಮತ್ತು ಭೀಮಣ್ಣ ನಾಯ್ಕ್‌ ಮಾಡಿದ ಸಹಾಯದ ಬಗ್ಗೆ ಅವರು ಹಂಚಿಕೊಂಡಿದ್ದಾರೆ.

ಅಲ್ಲಿಯೂ ಸೈ

ಇಲ್ಲಿಯೂ ಸೈ

ನಿಮ್ಮೆಲ್ಲರ ಪ್ರೀತಿಯ ಭೀಮಣ್ಣ ನನಗೆ ಭೀಮ್ ಮಾಮ. ಅಂದಿನಿಂದ ಇಲ್ಲಿಯವರೆಗೆ ಸ್ವಲ್ಪ ಕೂಡ ಬದಲಾಗದ ವ್ಯಕ್ತಿತ್ವ. ಮಾತು, ಕೋಪ ತುಂಬಾ ಕಡಿಮೆ,...