ಭಾರತ, ಮಾರ್ಚ್ 4 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ನಡೆಸುತ್ತಿದ್ದ ಅವಧಿಯಲ್ಲಿ ಬೌಲಿಂಗ್ ಮಾಡುತ್ತಿದ್ದ ಆಲ್​ರೌಂಡರ್ ರವೀಂದ್ರ ಜಡೇಜಾ ಅವರು ನಾನ್​ ಸ್ಟ್ರೈಕ್​ನಲ್ಲಿದ್ದ ಮಾರ್ನಸ್ ಲಬುಶೇನ್ ಅವರನ್ನು ರನ್​ ಓಡದಂತೆ ತಡೆದಿದ್ದು, ಸ್ಟ್ರೈಕ್​ನಲ್ಲಿದ್ದ ಸ್ಟೀವ್​ ಸ್ಮಿತ್ ಕೋಪಕ್ಕೆ ಕಾರಣವಾಗಿದೆ. ಬ್ಯಾಟರ್​​ಗೆ ರನ್ ಓಡಲು ಅಡ್ಡಿಪಡಿಸಿದ ಹಿನ್ನೆಲೆ ಜಡೇಜಾ ವಿರುದ್ಧ ಐಸಿಸಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಆಸ್ಟ್ರೇಲಿಯಾ ಇನ್ನಿಂಗ್ಸ್​​ನ 21ನೇ ಓವರ್​​ನಲ್ಲಿ ಜಡೇಜಾ ಬೌಲಿಂಗ್ ಮಾಡುತ್ತಿದ್ದರು. ಸ್ಟ್ರೈಕ್​ನಲ್ಲಿದ್ದ ಸ್ಟೀವ್​ ಸ್ಮಿತ್ ಅವರು ಓವರ್​ನ ಎರಡನೇ ಎಸೆತವನ್ನು ಆನ್​ಡ್ರೈವ್ ಮಾಡಿದರು. ಆಗ ಜಡ್ಡು ತಮ್ಮ ಬಲಭಾಗಕ್ಕೆ ಓಡಿ ಚೆಂಡನ್ನು ತಡೆಯಲು ಯತ್ನಿಸಿದರು. ಆದರೆ ಚೆಂಡು ಜಡೇಜಾ ಪಾದಕ್ಕೆ ತಾಗಿ ಶಾರ್ಟ್​​ ಮಿಡ್ ​ವಿಕೆಟ್​​ ಕಡೆಗೆ ಹೋಯಿತು. ಚೆಂಡು ಪ್ರಯತ್ನದಲ್ಲಿ ಜಡ್ಡು, ಲಬುಶೇನ್​ರನ್ನು ತಬ್ಬಿ ಹಿಡಿದರು. ಹೀಗಾಗಿ ಸ್ಮಿತ್ ರನ್...