Bengaluru, ಮಾರ್ಚ್ 21 -- Shani Dhaiya 2025: ಶನಿಯ ಚಲನೆ ಅಥವಾ ರಾಶಿಚಕ್ರ ಚಿಹ್ನೆಯ ಬದಲಾವಣೆಯು ದೇಶ ಮತ್ತು ಪ್ರಪಂಚದ ಜೊತೆಗೆ ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. 2025ರ ಮಾರ್ಚ್ 29 ರಂದು, ಶನಿ ತನ್ನ ಸ್ವಂತ ರಾಶಿಯಾದ ಕುಂಭ ರಾಶಿಯನ್ನು ಬಿಟ್ಟು ಗುರುವಿನ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿಯು ಮೀನ ರಾಶಿಗೆ ಚಲಿಸುವುದರಿಂದ, ಸಿಂಹ ಮತ್ತು ಧನು ರಾಶಿಯಲ್ಲಿ ಶನಿ ಧೈಯಾ ಪ್ರಾರಂಭವಾಗುತ್ತದೆ. ಈ ಶನಿಯ ಧೈಯಾ ಎರಡೂವರೆ ವರ್ಷ ಇರುತ್ತೆ. ಶನಿ ಧೈಯಾ ಸಮಯದಲ್ಲಿ, ಈ ಎರಡೂ ರಾಶಿಯವರ ಜಾತಕದಲ್ಲಿ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಸಿಂಹ ಮತ್ತು ಧನು ರಾಶಿಯವರ ಶನಿ ಧೈಯಾ ಪರಿಣಾಮಗಳು ಏನು ಮತ್ತು ಇದಕ್ಕೆ ಇರುವ ಪರಿಹಾರಗಳ ಬಗ್ಗೆ ತಿಳಿಯಿರಿ.

ಪಂಡಿತ್ ನರೇಂದ್ರ ಉಪಾಧ್ಯಾಯ ಅವರ ಪ್ರಕಾರ, ಸಿಂಹ ಮತ್ತು ಧನು ರಾಶಿಯವರು ಶನಿ ಧೈಯಾ ಸಮಯದಲ್ಲಿ ಉದ್ಯೋಗ ವೃತ್ತಿಯಲ್ಲಿ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಉನ್ನತ ಅಧಿಕಾರಿಗಳೊಂದಿಗೆ ವಿವಾದಕ್ಕೆ ಸಿಲುಕುವುದು ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾ...