ಭಾರತ, ಮಾರ್ಚ್ 3 -- ಹಣಕಾಸು ವರ್ಷದ ಕೊನೆಯ ತಿಂಗಳು ಮಾರ್ಚ್. ಈ ತಿಂಗಳು ಶೈಕ್ಷಣಿಕ ಚಟುವಟಿಕೆಗಳು ಕೂಡಾ ಬಹುತೇಕ ಕೊನೆಯ ಹಂತಕ್ಕೆ ತಲುಪುತ್ತವೆ. ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೂಡಾ ನಡೆಯಲಿದೆ. ಭಾರತದಾದ್ಯಂತದ ವಿದ್ಯಾರ್ಥಿಗಳಿಗೆ 2025ರ ಮಾರ್ಚ್ ತಿಂಗಳಲ್ಲಿ ಹಬ್ಬದ ವಾತಾವರಣವಿರಲಿದೆ. ಅಲ್ಲದೆ ಹೆಚ್ಚುವರಿ ವಾರಾಂತ್ಯ ದಿನದ ಕಾರಣದಿಂದ ಹಲವಾರು ರಜಾದಿನಗಳು ಬರುತ್ತವೆ. ಮಾರ್ಚ್‌ ತಿಂಗಳು ಐದು ಶನಿವಾರ ಮತ್ತು ಐದು ಭಾನುವಾರ ದಿನಗಳು ಬರುತ್ತವೆ. ಇದರೊಂದಿಗೆ ಹೋಳಿ, ಯುಗಾದಿ ಮತ್ತು ಈದ್-ಉಲ್-ಫಿತರ್ ಹಬ್ಬ ಕೂಡ ಇದೆ. ಶಾಲಾ ವಿದ್ಯಾರ್ಥಿಗಳು ಯಾವಾಗೆಲ್ಲ ರಜೆಯ ಖುಷಿ ಅನುಭವಿಸಬಹುದು ನೋಡೋಣ.

ಹೋಳಿ: ಮಾರ್ಚ್ 13ರಂದು ಬಣ್ಣಗಳ ಹಬ್ಬವಾದ ಹೋಳಿಯನ್ನು ಆಚರಿಸಲಾಗುತ್ತದೆ. ಇದು ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ದೇಶದ ಹೆಚ್ಚಿನ ರಾಜ್ಯಗಳಲ್ಲಿ ಸಂಭ್ರಮದಿಂದ ಬಣ್ಣಗಳ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಹೆಚ್ಚಿನ ರಾಜ್ಯಗಳಲ್ಲಿ ರಜೆ ಇರಲಿದೆ.

ಯುಗಾದಿ: ಮಾರ್ಚ್ 30ರಂದು ಹಿಂದೂಗಳ ಹೊಸ ವರ್ಷವನ್ನು ಸೂಚಿಸುವ ಯ...