ಭಾರತ, ಫೆಬ್ರವರಿ 22 -- ಮಾರ್ಚ್‌ನಲ್ಲಿ ಶನಿಗ್ರಹವು ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶ ಮಾಡುತ್ತಿದೆ. ಇದರ ಜೊತೆಗೆ ಸೂರ್ಯ ಮತ್ತು ಬುಧ ಕೂಡ ತಮ್ಮ ರಾಶಿಗಳನ್ನು ಬದಲಿಸುತ್ತಿದ್ದಾರೆ. ಮುಂದಿನ ತಿಂಗಳು ಗ್ರಹಗತಿಗಳಲ್ಲಿ ಸಾಕಷ್ಟು ಬದಲಾವಣೆ ಇರುತ್ತದೆ. ಮಾರ್ಚ್ ಮಧ್ಯದಲ್ಲಿ ಸೂರ್ಯನು ಶನಿಯೊಂದಿಗೆ ಕುಂಭ ರಾಶಿಯಲ್ಲಿರುತ್ತಾನೆ. ಇದರೊಂದಿಗೆ ಬುಧ ಗ್ರಹವು ಮೀನ ರಾಶಿಯನ್ನು ಪ್ರವೇಶಿಸುತ್ತದೆ.

ಗ್ರಹಗಳ ಸ್ಥಾನಪಲ್ಲಟದಿಂದ ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಅದರಲ್ಲೂ ಈ ಬಾರಿ 3 ಗ್ರಹಗಳ ಒಂದೇ ತಿಂಗಳಲ್ಲಿ ಸ್ಥಾನಪಲ್ಲಟ ಮಾಡಲಿದ್ದು, ಇದರಿಂದ ಕೆಲವು ರಾಶಿಯವರಿಗೆ ಭಾರಿ ಲಾಭವಾಗಲಿದೆ. ಅದೃಷ್ಟ ಈ ರಾಶಿಯವನ್ನು ಹಿಂಬಾಲಿಸುವ ಕಾರಣ ಅಂದುಕೊಳ್ಳದ ಅನಿರೀಕ್ಷಿತ ತಿರುವುಗಳು ಇವರ ಬಾಳಿನಲ್ಲಿ ನಡೆಯಲಿದೆ.

ಮಾರ್ಚ್ 14 ರಂದು ಸೂರ್ಯನು ರಾಶಿಯನ್ನು ಬದಲಾಯಿಸುತ್ತಾನೆ. ಇದರ ಜೊತೆ ಮಾರ್ಚ್ 15 ರಂದು ಬುಧ ಗ್ರಹವು ಹಿಮ್ಮುಖವಾಗಲಿದೆ. ಆದರೆ ಮುಖ್ಯವಾದ ವಿಷಯವೆಂದರೆ ಈ ಮೂರು ಗ್ರಹಗಳು ಶನಿನ ಜೊತೆಗೆ ಮಾರ್ಚ್‌ನಲ್ಲಿ ಮೀನ ರಾಶಿ...