ಭಾರತ, ಫೆಬ್ರವರಿ 23 -- ಮೊಸರು ತಿನ್ನುವುದು ತುಂಬಾ ಆರೋಗ್ಯಕರ. ಹಲವರು ಮೊಸರಿನೊಂದಿಗೆ ಊಟ ಮಾಡಲು ಇಷ್ಟಪಡುತ್ತಾರೆ. ಸಾಂಬಾರ್‌ನಲ್ಲಿ ಊಟ ಮಾಡಿದ ಬಳಿಕ ಸ್ವಲ್ಪ ಮೊಸರು ಹಾಕಿ ಊಟ ಮಾಡಿದರೆ ಊಟ ಪರಿಪೂರ್ಣವಾದಂತೆ. ಬಹುತೇಕ ಮಕ್ಕಳು ಕೂಡ ಅನ್ನದೊಂದಿಗೆ ಮೊಸರು ಬೆರೆಸಿ ತಿನ್ನಲು ಇಷ್ಟಪಡುತ್ತಾರೆ. ಮೊಸರು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದು ಆರೋಗ್ಯ ಮತ್ತು ರುಚಿಯಲ್ಲಿ ತೃಪ್ತಿಯನ್ನು ನೀಡುತ್ತದೆ. ಮೊಸರನ್ನು ಮನೆಯಲ್ಲಿಯೇ ತಯಾರಿಸಲಾಗುತ್ತದೆ.,

ಹಾಲನ್ನು ಬೆರೆಸಿ ದಪ್ಪ ಮೊಸರು ತಯಾರಿಸಲು ಕನಿಷ್ಠ 8 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಕೇವಲ 15 ನಿಮಿಷದಲ್ಲಿ ನೀವು ದಪ್ಪ ಮೊಸರನ್ನು ಮನೆಯಲ್ಲೇ ಮಾಡಬಹುದು. ಮಾರುಕಟ್ಟೆಯಲ್ಲಿ ಸಿಗುವ ಮೊಸರು ಮನೆಯಲ್ಲಿ ಮಾಡುವ ಮೊಸರಿಗಿಂತ ದಪ್ಪವಾಗಿರುತ್ತದೆ. ಮಾರುಕಟ್ಟೆಯ ಸಿಗುವ ದಪ್ಪ ಮೊಸರನ್ನು ಮನೆಯಲ್ಲೇ ಮಾಡುವುದು ಹೇಗೆ ಹಾಗೂ 15 ನಿಮಿಷದಲ್ಲಿ ಮೊಸರು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಮಾರುಕಟ್ಟೆಯಲ್ಲಿ ದೊರೆಯುವ ಮೊಸರಿನಂತೆ ತಯಾರಿಸಲು ಈ ಸಲಹ...