ಭಾರತ, ಮೇ 6 -- ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ಹೋಂಡಾ ಮೋಟಾರ್ ವೆಹಿಕಲ್ಸ್​​​ಗೆ ತುಸು ಬೇಡಿಕೆಯೇ ಹೆಚ್ಚು. ಏಕೆಂದರೆ ನಂಬಿಕೆಗೆ ಮತ್ತೊಂದು ಹೆಸರೇ ಹೋಂಡಾ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದೇ ಕಾರಣಕ್ಕೆ ಹೊಸ ಹೊಸ ಅಪ್​ಡೇಟ್​ಗಳೊಂದಿಗೆ ಕಾಲಕಾಲಕ್ಕೆ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆಯುತ್ತದೆ.

ಎಲೆಕ್ಟ್ರಿಕ್ (ವಿದ್ಯುತ್ ಚಾಲಿತ) ದ್ವಿಚಕ್ರ ವಾಹನಗಳನ್ನೂ ಮಾರುಕಟ್ಟೆಗೆ ಪರಿಚಯಿಸಿ ಅದರಿಂದಲೂ ವಿಶ್ವಾಸ ಗಳಿಸಿದೆ. ಇದೀಗ ಮತ್ತೊಂದು ಬೈಕ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ವಾಹನ ಪ್ರಿಯರನ್ನು ಸೆಳೆದಿದೆ. ಹೋಂಡಾ ಕ್ಯೂಸಿ1, ಆ್ಯಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹೊಸದಾಗಿ ಪರಿಚಯಿಸುವ ಮೂಲಕ ಸಂಚಲನ ಸೃಷ್ಟಿಸಿದೆ.

ನಾವೀಗ ಕ್ಯೂಸಿ1 (QCI EV) ದ್ವಿಚಕ್ರ ವಾಹನದ ಕುರಿತು ತಿಳಿಯೋಣ. ಅದರ ಫೀಚರ್ಸ್, ದರ, ಎಷ್ಟು ಮೈಲೇಜ್ ಕೊಡುತ್ತದೆ ಎನ್ನುವುದರ ಬಗ್ಗೆ ತಿಳಿಯೋಣ.

ನೂತನವಾಗಿ ಬಿಡುಗಡೆಯಾದ ಹೋಂಡಾ QC1 ಇ-ಸ್ಕೂಟರ್ ಬೆಲೆ ರೂ. 90,000 (ಎಕ್ಸ್-ಶೋರೂಂ). ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹ...