Bengaluru, ಫೆಬ್ರವರಿ 28 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಫೆಬ್ರುವರಿ 27ರ ಸಂಚಿಕೆಯಲ್ಲಿ ನರಸಿಂಹ ದಂಪತಿ ಮನೆಗೆ ಮರಳಿದ್ದಾರೆ. ಮನೆಯಲ್ಲಿ ಅವರು ಮಾತನಾಡುತ್ತಾ ಇರುವಾಗ, ಜಯಂತ್ ನಡವಳಿಕೆ ಬಗ್ಗೆ ನರಸಿಂಹಗೆ ಸಂಶಯ ಬಂದಿದೆ. ಜಯಂತ್ ಯಾಕೆ ಹಾಗೆ ನಡೆದುಕೊಂಡರು, ಅವರ ಮನೆಯವರ ಬಳಿ ಯಾಕೆ ಜಾಹ್ನವಿ ವಿಚಾರ ಮುಚ್ಚಿಟ್ಟಿದ್ದಾರೆ? ಆಸ್ಪತ್ರೆಯಲ್ಲಿ ಕೂಡ ಜಯಂತ್ ಹಾಗೆ ನಡೆದುಕೊಂಡಿದ್ದು ಯಾಕೆ ಎಂದು ಮನೆಯವರ ಬಳಿ ನರಸಿಂಹ ಚರ್ಚೆ ಮಾಡಿದ್ದಾರೆ. ಜಯಂತ್ ಯಾಕೋ ಯಾವುದೋ ವಿಚಾರ ಮುಚ್ಚಿಡುತ್ತಿದ್ದಾರೆ ಎಂದು ಅವರಿಗೆ ಸಂಶಯ ಬಂದಿದೆ. ಇತ್ತ ಮನೆಯಲ್ಲಿ ಜಯಂತ್ ಶಿವರಾತ್ರಿ ಪೂಜೆಗೆ ಸಿದ್ಧತೆ ನಡೆಸಿದ್ದಾನೆ. ಪೂಜೆಗೆ ಹೂಗಳನ್ನು ತಂದು, ಮನೆಯಲ್ಲಿ ಜಾಹ್ನವಿಗೆ ಕಾಯುತ್ತಾ ಕೂತಿದ್ದಾನೆ. ಆದರೆ ಜಾಹ್ನವಿ ಮಾತ್ರ, ಜಯಂತ್ ಮಾತಿಗೆ ಕಿವಿಕೊಟ್ಟಿಲ್ಲ. ಸ್ನಾನ ಮಾಡಿ ಪೂಜೆ ಮಾಡಿ ಎಂದರೂ ಕಿವಿಗೆ ಹಾಕಿಕೊಳ್ಳದೆ, ಅತ್ತ ಮುಖ ತಿರುಗಿಸಿ ಹೊರನಡೆದಿದ್ದಾಳೆ.

ಲಕ್ಷ್ಮೀ ನಿವಾಸದಲ್ಲಿ ಮನೆಯವರೆಲ್ಲ ಸೇರಿದ್ದಾರೆ....