ಭಾರತ, ಮಾರ್ಚ್ 2 -- ಮಾನವ ಕುಲದ ಉಗಮವಾಗಿ ಸಾವಿರಾರು ವರ್ಷಗಳು ಕಳೆದಿವೆ. ಇಷ್ಟು ವರ್ಷಗಳಲ್ಲಿ ಭೂಮಿಯ ಮೇಲೆ ಹಲವು ಆಪತ್ತುಗಳು ಸಂಭವಿಸಿವೆ. ಇದರಿಂದ ಮನುಕುಲಕ್ಕೆ ತೊಂದರೆಗಳಾಗಿವೆ. 1349 ರಲ್ಲಿ ಬ್ಲ್ಯಾಕ್ ಡೆತ್ ಅಥವಾ 1918 ರ ಫ್ಲೂ ಸಾಂಕ್ರಾಮಿಕ ರೋಗದಿಂದ ಉಂಟಾದ ವಿನಾಶವೇ ಮನುಕುಲದ ಕಂಡ ಕೆಟ್ಟ ವರ್ಷ ಎಂದು ಹಲವರು ಅಂದುಕೊಳ್ಳಬಹುದು. ಆದರೆ ಈ ಎಲ್ಲಕ್ಕಿಂತಲೂ ಮೊದಲೇ ದೊಡ್ಡ ಆಪತ್ತೊಂದು ಸಂಭವಿಸಿತ್ತು.

ಸುಮಾರು 18 ತಿಂಗಳುಗಳ ಕಾಲ ಇದ್ದ ಆ ಪರಿಸ್ಥಿತಿ ಮನುಷ್ಯರಿಗೆ ಅತ್ಯಂತ ಕೆಟ್ಟ ಸಮಯ ಎನ್ನಿಸಿತ್ತು. ಆಗ ಮಾನವನ ಬದುಕಿನ ಪರಿಸ್ಥಿತಿ ಅತ್ಯಂತ ಭೀಕರವಾಗಿತ್ತು. ಅದು ಕ್ರಿಸ್ತಶಕ 536ನೇ ವರ್ಷ. ಆ ಸಮಯದಲ್ಲಿ ಮನುಷ್ಯನ ಬದುಕು ಅಕ್ಷರಶಃ ನರಕ ಸದೃಶವಾಗಿತ್ತು. ಆಗ ಜನರು ಬದುಕುಳಿಯಲು 18 ತಿಂಗಳುಗಳ ಕಾಲ ತುಂಬಾ ಕಷ್ಟಪಟ್ಟು ‍ಪಡಬೇಕಾಯ್ತು. ಏಷ್ಯಾದ ಕೆಲವು ಭಾಗಗಳು ಮತ್ತು ಯುರೋಪಿನ ಕೆಲವು ಭಾಗಗಳು 18 ತಿಂಗಳುಗಳ ಕಾಲ ಕತ್ತಲೆಯಲ್ಲಿ ಮುಳುಗಿದ್ದವು. ಇದರಿಂದ ಮನುಕುಲದ ಚಿತ್ರಣವೇ ಬದಲಾಗಿತ್ತು.

ಕ್ರಿಸ್ತಶಕ 536ರಲ್ಲಿ ವಿಚಿತ...