ಭಾರತ, ಏಪ್ರಿಲ್ 17 -- ಮಾಧುರಿ ದೀಕ್ಷಿತ್‌ ಬಾಲಿವುಡ್ ಚಿತ್ರರಂಗದ ಸ್ಟಾರ್ ನಟಿ. ಇವರ ಡಾನ್ಸ್ ಹಾಗೂ ನಟನೆಗೆ ಮನಸೋಲದವರಿಲ್ಲ. 1990 ರ ದಶಕದ ಟಾಪ್ ನಟಿಯಲ್ಲಿ ಒಬ್ಬರಾದ ಮಾಧುರಿ ವರ್ಚಸ್ಸು ಈಗಲೂ ಕಡಿಮೆಯಾಗಿಲ್ಲ. ಪರದೆ ಮೇಲೆ ಮಾಧುರಿ ಕಾಣಿಸಿದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಭಾರತದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಮಾಧುರಿ ಇಂದಿಗೂ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸುತ್ತಿದ್ದಾರೆ. 57ರ ಹರೆಯದ ಮಾಧುರಿ 25 ಯುವತಿಯಂತೆ ಕಾಣಿಸುತ್ತಾರೆ.

ಅಪರಿಮಿತ ಸೌಂದರ್ಯದ ಗಣಿಯಾಗಿರುವ ಮಾಧುರಿಗೆ ಸಿನಿಮಾರಂಗದಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಇವರ ನಟನೆ, ಡಾನ್ಸ್‌, ಸೌಂದರ್ಯಕ್ಕೆ ಎಂಥದವರು ಕೂಡ ಅಭಿಮಾನಿಯಾಗಬೇಕು. ಬಾಲಿವುಡ್‌ ಸೇರಿದಂತೆ ಭಾರತೀಯ ಚಿತ್ರರಂಗದ ಅದೆಷ್ಟೋ ನಟರು ತಮ್ಮ ಇಷ್ಟದ ನಟಿ ಯಾರು ಎಂದಾಗ ಮಾಧುರಿ ದೀಕ್ಷಿತ್ ಹೆಸರು ಹೇಳುತ್ತಾರೆ.

ಬಾಲಿವುಡ್‌ನಲ್ಲಿ ಮಾಧುರಿ ದೀಕ್ಷಿತ್‌ಗೆ ಒಬ್ಬರು ಕಟ್ಟಾ ಅಭಿಮಾನಿ ಇದ್ದಾರೆ. ಅವರು ಬಾಲಿವುಡ್‌ನ ಸ್ಟಾರ್ ನಟ ಕೂಡ ಹೌದು. ಅ...