Bangalore, ಮೇ 28 -- ಬೆಂಗಳೂರು: ವಿನೋದ್ ಪ್ರಭಾಕರ್ ಅಭಿನಯದ 'ಮಾದೇವ' ಚಿತ್ರವು ಜೂನ್ 06ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವು ತಮ್ಮ ಚಿತ್ರಜೀವನದಲ್ಲೇ ಬಹಳ ಮುಖ್ಯವಾದ ಚಿತ್ರ ಮತ್ತು ಇದುವರೆಗೂ ತಾನು ಇಂಥದ್ದೊಂದು ಪಾತ್ರವನ್ನು ಮಾಡಿಲ್ಲ ಎಂದು ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಕುರಿತು ಮಾತನಾಡಿರುವ ಅವರು, ''ಮಾದೇವ' ನನ್ನ ಸಿನಿಪಯಣದಲ್ಲಿ ಬಹಳ ಮುಖ್ಯವಾದ ಚಿತ್ರ. ನಟನಾಗಿ ಸಾಕಷ್ಟು ಪರಿವರ್ತನೆಗೊಂಡಿದ್ದೇನೆ. ಇದುವರೆಗೂ ನನ್ನ ಚಿತ್ರಗಳಲ್ಲಿ ಆ್ಯಕ್ಷನ್ ಚೆನ್ನಾಗಿರುತ್ತಿತ್ತು. ಚಿತ್ರದ ವ್ಯಾಪಾರ ಚೆನ್ನಾಗಿರುತ್ತಿತ್ತು. ಆದರೆ, ಕಥೆ ವಿಷಯದಲ್ಲಿ ಅದೇ ಖುಷಿ ಇರಲಿಲ್ಲ. ಎಷ್ಟೋ ಬಾರಿ ಫೈಟುಗಳ ಮಧ್ಯೆ ಫಿಲ್ಲರ್ ಆಗಿ ಕಥೆ ಇರುತ್ತಿತ್ತೇ ಹೊರತು, ಕಥೆ ಇರುತ್ತಿರಲಿಲ್ಲ. ಹಾಗಾಗಿ, ಒಳ್ಳೆಯ ಅಭಿನಯ ಮಾಡುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ' ಎಂದು ವಿನೋದ್ ಹೇಳಿದ್ದಾರೆ.
ಹೀಗಿರುವಾಗಲೇ, ಅವರಿಗೆ 'ಮಾದೇವ' ಚಿತ್ರದ ಕಥೆ ಸಿಕ್ಕಿತಂತೆ. 'ಕೋವಿಡ್ ಸಂದರ್ಭದಲ್ಲಿ ನವೀನ್ ಈ ಕಥೆ ತಂದರು. ಅವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.