Kollegal, ಮಾರ್ಚ್ 1 -- ಚಾಮರಾಜನಗರ: ಅವರು ಬೇರೆ ಬೇರೆ ಊರಿನವರು. ಎಂಜಿನಿಯರಿಂಗ್‌ ಓದಲು ಮೈಸೂರಿಗೆ ಬಂದು ಸ್ನೇಹಿತರಾದವರು. ಅವಕಾಶ ಸಿಕ್ಕಾಗಲೆಲ್ಲಾ ಪ್ರವಾಸ ಹೋಗಿ ಬರುತ್ತಿದ್ದರು. ಈ ಬಾರಿ ಹೊರಟಿದ್ದು ಕರ್ನಾಟಕದ ಪ್ರಸಿದ್ದ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ. ಶಿವರಾತ್ರಿ ಅಂಗವಾಗಿ ಆಯೋಜನೆಗೊಂಡಿರುವ ಜಾತ್ರೆಗೆಂದು ಸ್ನೇಹಿತರು ಒಂದೇ ಕಾರಿನಲ್ಲಿ ಹೊರಟಿದ್ದರು. ಮೈಸೂರಿನಿಂದ ಕೊಳ್ಳೇಗಾಲ ದಾಟಿ ಹನೂರು ತಲುಪುವ ಮುನ್ನವೇ ಅವರು ಸಂಚರಿಸುತ್ತಿದ್ದ ಕಾರಿಗೆ ಅಪ್ಪಳಿಸಿದ್ದು ಯಮಸ್ವರೂಪಿ ಟಿಪ್ಪರ್‌. ಟಿಪ್ಪರ್‌ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಹಾಗೂ ಟಿಪ್ಪರ್‌ ಉರುಳಿ ಗುಂಡಿಗೆ ಬಿದ್ದಿವೆ. ತಿರುವು ಇರುವ ಪ್ರದೇಶದಲ್ಲಿ ಹೊರಟಿದ್ದಾಗ ಟಿಪ್ಪರ್‌ ಏಕಾಏಕಿ ನುಗ್ಗಿದ್ದೇ ಐವರ ಸಾವಿನ ಈ ದುರ್ಘಟನೆಗೆ ಕಾರಣ ಎನ್ನುವುದನ್ನು ಚಾಮರಾಜನಗರ ಜಿಲ್ಲಾ ಪೊಲೀಸರು ಖಚಿತಪಡಿಸಿದ್ದಾರೆ.

ಈ ದುರ್ಘಟನೆಯಲ್ಲಿ ಮೈಸೂರಿನ ಎಂಐಟಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಾದ ಮೈಸೂರಿನವಾದ ನಿಖಿತಾ( 22) , ಶ್ರೀಲಕ್ಷ್ಮಿ(23), ಮಂಡ್ಯ ಜಿಲ್ಲ...