Bangalore, ಫೆಬ್ರವರಿ 6 -- ಬೆಂಗಳೂರು: ಭಾರತೀಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ( ಎಸ್‌ಬಿಐ) ಸಾಲ ಪಡೆಯಲು ನಕಲಿ ದಾಖಲೆ ಸೃಷ್ಟಿಸಿದ ಆರೋಪದಲ್ಲಿ ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿ ಸಹಿತ ನಾಲ್ವರ ವಿರುದ್ದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ. ಕೃಷ್ಣಯ್ಯ ಶೆಟ್ಟಿ ಸಹಿತ ನಾಲ್ವರೂ ವಂಚನೆ ಪ್ರಕರಣದಲ್ಲಿ ದೋಷಿಗಳು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ. ನ್ಯಾಯಾಲಯ ಅಂತಿಮ ತೀರ್ಪನ್ನು ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್‌ ಅವರು ಪ್ರಕಟಿಸಿದ್ದು, ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ತಕ್ಷಣವೇ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆಯುವಂತೆ ಸಿಬಿಐಗೆ ನ್ಯಾಯಾಧೀಶರು ಸೂಚನೆ ನೀಡಿದೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು( ಈಗ ಎಸ್‌ಬಿಐ) ಬೆಂಗಳೂರು ಗಾಂಧಿನಗರ ಶಾಖೆಯಲ್ಲಿ ನಿವೇಶನಗಳಿಗೆ ಸಾಲ ಕೊಡಿಸುವುದಾಗಿ ಕೃಷ್ಣಯ್ಯ ಶೆಟ್ಟಿ ಹಾಗೂ ಅವರ ಪಾಲುದಾರರರಾಗಿದ್ದ ಶ್ರೀನಿವಾಸು, ಮುನಿರಾಜು, ಗಾಂಧಿನಗರ ಶಾಖೆಯ ಎಸ್ಬಿಎಂನ ವ್ಯವಸ...