ಭಾರತ, ಮೇ 1 -- ರಾಮನಗರ: ಮಾಜಿ ಲೋಕಸಭಾ ಸದಸ್ಯ ಡಿ.ಕೆ. ಸುರೇಶ್ ಅವರ ಪತ್ನಿ ಎಂದು ಹೇಳಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದ ಶಿಕ್ಷಕಿ ಪವಿತ್ರ ಅವರನ್ನು ರಾಮನಗರ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈಕೆ ಮೈಸೂರು ತಾಲ್ಲೂಕಿನ ಇಲವಾಲದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ತಾನು ಬೆಂಗಳೂರು ಗ್ರಾಮಾಂತರ ಲೋಕಸಭೆಯ ಮಾಜಿ ಸದಸ್ಯ ಡಿಕೆ ಸುರೇಶ ಅವರ ಪತ್ನಿ ಎಂದು ವಿಡಿಯೋ ಹಂಚಿಕೊಂಡಿದ್ದರು.
ಪವಿತ್ರ ಅವರು ಕನಕಪುರ ತಾಲ್ಲೂಕಿನ ದೊಡ್ಡಆಲಹಳ್ಳಿ ಮೂಲದವರು ಎಂದು ತಿಳಿದು ಬಂದಿದ್ದು, ಪತಿಯಿಂದ ಡೈವೋರ್ಸ್ ಪಡೆದಿದ್ದಾರೆ. ಪ್ರತ್ಯೇಕವಾಗಿ ವಾಸವಾಗಿದ್ದ ಅವರು ವಿಚ್ಛೇದನ ನಂತರ ಮಾನಸಿಕವಾಗಿಯೂ ಕುಗ್ಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಾಸವಿದ್ದ ಮನೆಯ ನೆರೆಹೊರೆಯವರನ್ನು ಹೆದರಿಸಲು ತಾನು ಡಿ.ಕೆ. ಸುರೇಶ್ ಪತ್ನಿ ಎಂದು ಪವಿತ್ರ ಹೇಳಿಕೊಳ್ಳುತ್ತಿದ್ದರು. ತನ್ನದೇ ಚಿತ್ರಗಳನ್ನು ಸುರೇಶ್ ಅವರ ಚಿತ...
Click here to read full article from source
To read the full article or to get the complete feed from this publication, please
Contact Us.