ಭಾರತ, ಫೆಬ್ರವರಿ 21 -- ಕೊಲ್ಕತ್ತಾ: ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಪ್ರಯಾಣ ಮಾಡುತ್ತಿದ್ದ ಕಾರು ಪಶ್ಚಿಮ ಬಂಗಾಳದ ದುರ್ಗಾಪುರ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ. ಕಾರ್ಯಕ್ರಮವೊಂದಕ್ಕೆ ತೆರಳಲು ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಅದೃಷವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ಘಟನೆಯಲ್ಲಿ ಗಂಗೂಲಿ ಬೆಂಗಾವಲು ಪಡೆಯ 2 ವಾಹನಗಳಿಗೆ ಹಾನಿಯಾಗಿದೆ. ಬರ್ಧಮಾನ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಗಂಗೂಲಿ ತಮ್ಮ ರೇಂಜ್ ರೋವರ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ದುರ್ಗಾಪುರ ಹೆದ್ದಾರಿಯ ದಂತನ್‌ಪುರ ಎಂಬಲ್ಲಿ ಗಂಗೂಲಿ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ.
ಬೆಂಗಾವಲು ಪಡೆಯ ವಾಹನದ ಸಮೀಪ ಲಾರಿ ಬಂದಿದ್ದರಿಂದ ಬ್ರೇಕ್ ಹಾಕಬೇಕಾಯಿತು, ಇದು ವಾಹನಗಳು ಒಂದಕ್ಕೊಂಡು ಡಿಕ್ಕಿ ಹೊಡೆದುಕೊಂಡಿವೆ. ಆದರೆ ಯಾವುದೇ ಪ್ರಾಣಾಪಾಯವಾಗಿಲ್ಲ. ಪರಿಸ್ಥಿತಿ ತಿಳಿಗೊಂಡ ನಂತರ ಗಂಗೂಲಿ ತಾವು ತೆರಳಬೇಕಿದ್ದ ಕಾರ್ಯಕ್ರಮಕ್ಕೆ ತೆರಳಿದ್ದಾರೆ.
Published by HT Digital Content Services with per...
Click here to read full article from source
To read the full article or to get the complete feed from this publication, please
Contact Us.