ಭಾರತ, ಏಪ್ರಿಲ್ 21 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸುತ್ತಿದೆ. ಬ್ಯಾಟರ್​ಗಳ ಜತೆಗೆ ಬೌಲರ್​ಗಳು ಮಿಂಚಿನ ಪ್ರದರ್ಶನದೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಯುವಕರನ್ನೂ ನಾಚಿಸುವಂತೆ ಹಿರಿಯರು ಪ್ರದರ್ಶನ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗ ಮತ್ತೊಂದು ಹೈವೋಲ್ಟೇಜ್ ಕದನಕ್ಕೆ ಶ್ರೀಮಂತ ಲೀಗ್ ಸಜ್ಜಾಗಿದೆ. ಏಪ್ರಿಲ್ 22ರ ಮಂಗಳವಾರ ಸಂಜೆ 7.30ಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಇದು ಲಕ್ನೋ, ಡೆಲ್ಲಿ ಕಾದಾಟವಲ್ಲ, ರಾಹುಲ್ ಮತ್ತು ಲಕ್ನೋ ಕಾದಾಟವಾಗಿ ಪರಿವರ್ತನೆಯಾಗಿದೆ.

ಉಭಯ ತಂಡಗಳು ಪ್ರಸಕ್ತ ಆವೃತ್ತಿಯಲ್ಲಿ 2ನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಮೊದಲ ಮುಖಾಮುಖಿಯಲ್ಲಿ ಲಕ್ನೋ ಮತ್ತು ಡೆಲ್ಲಿ ತಂಡಗಳು ತಮ್ಮ ಅಭಿಯಾನ ಆರಂಭಿಸಿದ್ದವು. ಆದರೆ ಆ ಪಂದ್ಯದಲ್ಲಿ ಡೆಲ್ಲಿ 1 ವಿಕೆಟ್ ರೋಚಕ ಗೆಲುವು ಸಾಧಿಸಿತ್ತು. ಅಶುತೋಷ್ ಶರ್ಮಾ ಆರ್ಭಟಿಸಿ ಸೋಲುವ ಪಂದ್ಯವನ್ನು ಗೆಲುವಿನತ್ತ ತಿರುಗಿಸಿದ್ದರು. ಈ ಸೋಲಿ...