Bengaluru, ಜನವರಿ 27 -- ಹಿಂದೂ ಕ್ಯಾಲೆಂಡರ್‌ ಪ್ರಕಾರ ಮಾಘ ಮಾಸವು 11ನೆ ತಿಂಗಳಾಗಿದೆ. ಚಂದ್ರನು ಮಖಾ ನಕ್ಷತ್ರದಲ್ಲಿ ಸಂಚರಿಸುವುದರಿಂದ ಈ ತಿಂಗಳಿಗೆ ಈ ಮಾಘ ಮಾಸ ಎಂಬ ಹೆಸರು ಬಂದಿದೆ. ಉತ್ತರಾಯಣ ಪುಣ್ಯ ಕಾಲದಲ್ಲಿ ಬರುವ ಈ ಮಾಸದಲ್ಲಿ ವಿಷ್ಣುವಿನ ಆರಾಧನೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಮಾಘ ಮಾಸದಲ್ಲಿ ನದಿಯಲ್ಲಿ ಸ್ನಾನ ಮಾಡಿ ವಿಷ್ಣುವನ್ನು ಪೂಜಿಸಿ ಕೈಲಾದಷ್ಟು ದಾನ ಮಾಡಿದರೆ ಅನೇಕ ಪುಣ್ಯ ಕಾರ್ಯಗಳನ್ನು ಮಾಡಿದ ಫಲ ದೊರೆಯುತ್ತದೆ.

ಮಾಘ ಮಾಸದಲ್ಲಿ ಎಲ್ಲಾ ನದಿಗಳು ಪವಿತ್ರ ಗಂಗೆಗೆ ಸಮಾನ ಎಂದು ಪುರಾಣಗಳು ಹೇಳುತ್ತವೆ. ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದವರು ಸಾಧ್ಯವಾದಷ್ಟು ಕೊಳ ಅಥವಾ ಬಾವಿ ನೀರಿನಲ್ಲಿ ಸ್ನಾನ ಮಾಡಬಹುದು. ಸ್ನಾನದ ನಂತರ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದು ಸಹ ಒಂದು ಆಚರಣೆಯಾಗಿದೆ. ಅಲ್ಲದೆ, ಈ ಮಾಘ ಮಾಸದಲ್ಲಿ ಎಳ್ಳು ದಾನ ಮಾಡುವುದರಿಂದ ವಿಶೇಷ ಫಲಗಳು ದೊರೆಯುತ್ತದೆ. ಮಾಘಮಾಸದಲ್ಲಿ ಬರುವ ಹುಣ್ಣಿಮೆ ಕೂಡಾ ಬಹಳ ವಿಶೇಷವಾದುದು. ತಿಂಗಳಿಡೀ ಪ್ರತಿದಿನ ನದಿಯಲ್ಲಿ ಸ್ನಾನ ಮಾಡಲು ...