ಭಾರತ, ಫೆಬ್ರವರಿ 4 -- ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾ ಕುಂಭ ಮೇಳ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಜನವರಿ 13 ರಿಂದ ಆರಂಭವಾಗಿರುವ ಮಹಾ ಕುಂಭ ಮೇಳದಲ್ಲಿ ಈಗಾಗಲೇ ಕೋಟ್ಯಂತರ ಮಂದಿ ಪವಿತ್ರ ಸ್ನಾನ ಮಾಡುವ ಮೂಲಕ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆಂದೇಳುತ್ತಿದ್ದಾರೆ. ಸಾಧು, ಸಂತರು, ಭಕ್ತರು ಇನ್ನೂ ಕೂಡ ಸಮರೋಪಾದಿಯಲ್ಲಿ ಪ್ರಯಾಗ್‌ರಾಜ್‌ನತ್ತ ಆಗಮಿಸುತ್ತಿದ್ದು ಗಂಗಾ, ಯಮುನ ಹಾಗೂ ಸರಸ್ವತಿ ನದಿಗಳ ವಿತ್ರ ಸಂಗಮದಲ್ಲಿ ಶಾಹಿ ಸ್ನಾನ ಮಾಡುತ್ತಿದ್ದಾರೆ.

ಸಾಧು, ಸಂತರು, ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸುವ ಮೂಲಕ ಮಹಾ ಕುಂಭ ಮೇಳದ ಆಕರ್ಷಣೆಯಾಗುತ್ತಿದ್ದಾರೆ. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಾ ಕುಂಭ ಮೇಳದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಅವರು ಫೆಬ್ರವರಿ 5 ರ ಮಾಘ ಅಷ್ಟಮಿಯಂದು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಪವಿತ್ರ ಸ್ನಾನಕ್ಕಾಗಿ ಪ್ರಧಾನಿ ನಮೋ ಮಾಘ ಅಷ್ಟಮಿಯನ್ನೇ ಯಾಕೆ ಆಯ್ಕೆ ಮಾಡಿಕೊಂಡರು, ಮಾಘ ಅಷ್ಟಮಿಗೂ ಅಧ್ಯಾತ್ಮಕ್ಕೆ ಏನು...